ETV Bharat / entertainment

ಅಭಿಮಾನಿಗಳು ಮನೆ ಹತ್ತಿರ ಬಂದ್ರೂ, ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ: ಅಭಿಷೇಕ್​ ಅಂಬರೀಶ್​ ಹೀಗಂದಿದ್ಯಾಕೆ? - ಈಟಿವಿ ಭಾರತ ಕನ್ನಡ

ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ಹೋರಾಟ ಮುಂದುವರೆದಿದ್ದು, ಈ ನಿಮಿತ್ತ ನಟ​ ಅಭಿಷೇಕ್​ ಅಂಬರೀಶ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

Actor Abhishek Ambareesh birthday celebration update
ಅಭಿಷೇಕ್​ ಅಂಬರೀಶ್​ ಇನ್​ಸ್ಟಾ ಸ್ಟೋರಿ
author img

By ETV Bharat Karnataka Team

Published : Oct 2, 2023, 4:31 PM IST

ಕರ್ನಾಟಕದಾದ್ಯಂತ ಕಾವೇರಿ ಕಿಚ್ಚು ಜೋರಾಗಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಸೆಪ್ಟೆಂಬರ್​ 29ರಂದು ರಾಜ್ಯ ಬಂದ್​ ಕೂಡ ಮಾಡಲಾಗಿತ್ತು. ಅನ್ನದಾತರು, ಕನ್ನಡ ಪರ ಸಂಘಟನೆಗಳಿಗೆ ಕನ್ನಡ ಚಿತ್ರರಂಗದವರು ಬೆಂಬಲವಾಗಿ ನಿಂತು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಈಗಾಗಲೇ ಹೋರಾಟಗಳಲ್ಲಿ ಭಾಗಿಯಾಗಿದ್ದ ನಟ​ ಅಭಿಷೇಕ್​ ಅಂಬರೀಶ್ ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಕಾವೇರಿ ಹೋರಾಟಕ್ಕೆ ಮತ್ತೊಮ್ಮೆ ಬೆಂಬಲ ಸೂಚಿಸಿದ್ದಾರೆ.

ಅಕ್ಟೋಬರ್​ 3ರಂದು ಜೂನಿಯರ್​​ ರೆಬಲ್​ ಸ್ಟಾರ್​ ಜನ್ಮದಿನ. ಪ್ರತಿ ವರ್ಷವು ಅಭಿಷೇಕ್, ಜೆ.ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಭಿಷೇಕ್​ಗೆ ಈ ವರ್ಷದ ಹುಟ್ಟುಹಬ್ಬವಂತು ತುಂಬಾ ಸ್ಪೆಷಲ್​. ಆದರೆ, ಅವರು ತಮ್ಮ 30ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲು ಒಲ್ಲೆ ಎಂದಿದ್ದಾರೆ. ಕನ್ನಡಿಗರು ಕಾವೇರಿಗಾಗಿ ನಡೆಸುತ್ತಿರುವ ಹೋರಾಟದ ಮಧ್ಯೆ ಬರ್ತ್​ಡೇ ಗ್ರ್ಯಾಂಡ್​ ಆಗಿ ಮಾಡಿಕೊಳ್ಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

Actor Abhishek Ambareesh birthday celebration update
ಅಭಿಷೇಕ್​ ಅಂಬರೀಶ್​ ಇನ್​ಸ್ಟಾ ಸ್ಟೋರಿ

ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿ ಹಾಕಿಕೊಂಡಿರುವ ಅಭಿಷೇಕ್​ ಅಂಬರೀಶ್​, "ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ. ಎಲ್ಲಾ ರೆಬೆಲ್​ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ, ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ, ಬಂದವರು ಯಾವುದೇ ಹಾರ, ಕೇಕ್​, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ. - ಇಂತಿ ನಿಮ್ಮ ಪ್ರೀತಿಯ ಅಭಿಷೇಕ್​ ಅಂಬರೀಶ್​" ಎಂದು ಬರೆದುಕೊಂಡಿದ್ದಾರೆ.

ನಟ ಅಭಿಷೇಕ್​ ಅಂಬರೀಶ್​ ಈ ಮೂಲಕ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬ ಆಚರಣೆಯ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ. ಅಭಿಮಾನಿಗಳು ಅವರ ಮನೆ ಹತ್ತಿರ ತೆರಳಿ ವಿಶ್​ ಮಾಡಲು ಅವಕಾಶವಿದೆ. ಆದರೆ ಕೇಕ್​, ಹಾರ ಅಥವಾ ಯಾವುದೇ ಉಡುಗೊರೆಗಳನ್ನು ತರದೇ ಬಂದು ಶುಭಹಾರೈಸುವಂತೆ ಜೂನಿಯರ್​ ರೆಬಲ್​ ಸ್ಟಾರ್​ ಮನವಿ ಮಾಡಿದ್ದಾರೆ.

ಇನ್ನು, ನಾಳೆ ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರ​ ಹುಟ್ಟುಹಬ್ಬ ಕೂಡ ಇದೆ. ಈಗಾಗಲೇ ಅವರು ಕಾವೇರಿ ಹೋರಾಟದ ಸಲುವಾಗಿ ಬರ್ತ್​ಡೇ ಸೆಲೆಬ್ರೇಶನ್​ಗೆ ಬ್ರೇಕ್​ ಹಾಕಿದ್ದಾರೆ. "ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ (ಅಕ್ಟೋಬರ್​ 3) ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರುನಾಡಲ್ಲಿ 'ಕಾವೇರಿ' ಕಿಚ್ಚು; ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ರಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.