ETV Bharat / entertainment

'ಒಂದೊಳ್ಳೆ ಸಿನಿಮಾಗೆ ಭಾಷೆಯ ಹಂಗಿಲ್ಲ': ಅಮೆರಿಕದಲ್ಲಿ ರಾಮ್ ​ಚರಣ್​​ ಮಾತು

ಆಸ್ಕರ್​ 2023ಕ್ಕೆ ದಿನಗಣನೆ ಶುರುವಾಗಿದ್ದು, ಅಮೆರಿಕದಲ್ಲಿ ನಟ ರಾಮ್​ ಚರಣ್​ ಆರ್​ಆರ್​ಆರ್​ ಪ್ರಮೋಶನ್​ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

Ram Charan
ನಟ ರಾಮ್ ​ಚರಣ್
author img

By

Published : Mar 9, 2023, 2:51 PM IST

ಭಾರತೀಯ ಚಿತ್ರರಂಗದಲ್ಲೀಗ ಆರ್​ಆರ್​ಆರ್​ ಚಿತ್ರದ್ದೇ ಚರ್ಚೆ. ಸಾಗರದಾಚೆಗೂ ನಾಟು ನಾಟು ಸದ್ದು ಮಾಡುತ್ತಿದೆ. ಭಾರತದ ಖ್ಯಾತ ನಿರ್ದೇಶಕ ಎಸ್​​​ಎಸ್​ ರಾಜಮೌಳಿ ಆ್ಯಕ್ಷನ್​ ಕಟ್ ಹೇಳಿರುವ, ತೆಲುಗು ಸೂಪರ್​ ಸ್ಟಾರ್​ಗಳಾದ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅದ್ಭುತ ಅಭಿನಯದ ಆರ್​ಆರ್​ಆರ್​ ಸಿನಿಮಾ ಕ್ರೇಜ್​​ ವಿಶ್ವದೆಲ್ಲೆಡೆ ಪಸರಿಸಿದೆ.

ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್​ಆರ್​ಆರ್ ಚಿತ್ರತಂಡ ಮತ್ತು ಭಾರತೀಯ ಸಿನಿಮಾ ರಂಗದ ಗಮನ ​ಆರ್​ಆರ್​ಆರ್​ ಚಿತ್ರದ ಮೇಲೆ ಕೇಂದ್ರೀಕೃತವಾಗಿದೆ. ಇದೇ ಮಾರ್ಚ್​​ 12ರಂದು ಆಸ್ಕರ್​ 2023 ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಟ ರಾಮ್​ಚರಣ್​​ ಚಿತ್ರದ ಪ್ರಮೋಶನ್​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಆಸ್ಕರ್​ 2023 ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕಾಡೆಮಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್​ಆರ್​ಆರ್​ ಚಿತ್ರದ ಸೂಪರ್​ ಹಿಟ್​ ನಾಟು ನಾಟು ಹಾಡು ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ ಭಾರತದ ಬಹುಬೇಡಿಕೆ ನಟ ರಾಮ್​ಚರಣ್​​ ಅಮೆರಿಕದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಎರಡು ಅಂತಾರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿದ್ದಾರೆ. ಎಂಟರ್‌ಟೈನ್‌ಮೆಂಟ್ ಟುನೈಟ್, ಕಲ್ಚರ್ ಪಾಪ್ ಹೆಸರಿನ ಶೋಗಳಲ್ಲಿ ಭಾಗಿಯಾದ ರಾಮ್​ಚರಣ್​​ ಜಾಗತಿಕ ಮಟ್ಟದಲ್ಲಿ ಆರ್​ಆರ್​ಆರ್​ ಜನಪ್ರಿಯತೆ ಬಗ್ಗೆ ಮಾತನಾಡಿದರು.

ಆರ್‌ಆರ್‌ಆರ್ ಜನಪ್ರಿಯತೆ ಬಗ್ಗೆ ಮಾತನಾಡಿದ ನಟ ರಾಮ್ ಚರಣ್, 'ನಾಟು ನಾಟು' ನಮ್ಮ ಹಾಡು ಮಾತ್ರವಲ್ಲ, ಅದು ಸಾರ್ವಜನಿಕ ಹಾಡಾಗಿದೆ ಎಂದು ಹೇಳಿದರು. ವಿವಿಧ ವಯೋಮಾನದ ಜನರು ಮತ್ತು ವಿವಿಧ ಸಂಸ್ಕೃತಿಗಳ ಜನರು ಇದನ್ನು ಪೂರ್ಣ ಹೃದಯದಿಂದ ಸ್ವೀಕರಿಸಿದ್ದಾರೆ. ಜನರಿಗೆ ಸಾಹಿತ್ಯ ಅರ್ಥವಾಗದಿದ್ದರೂ, ಅವರು ತಮ್ಮ ಪ್ರೀತಿಯನ್ನು ಈ ಚಿತ್ರಕ್ಕೆ, ಹಾಡಿಗೆ ಸಮರ್ಪಿಸಿದ್ದಾರೆ ಎಂದು ಹೇಳಿದರು.

ಅಮೆರಿಕ ಸಂದರ್ಶನದ ತುಣುಕುಗಳು ಸಾಮಾಜಿಜ ಜಾಲತಾನದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ. ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 'ಗ್ಲೋಬಲ್ ಸ್ಟಾರ್ ರಾಮಚರಣ್', 'ಗ್ರೇಟ್ ಇಂಟರ್​​ವ್ಯೂವ್' ಎಂದೆಲ್ಲಾ ನಟನ ಮೇಲೆ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಪಠಾಣ್'​ ಗೆಲ್ಲಿಸಿದ್ದಕ್ಕೆ ಸರ್ವರಿಗೂ ಧನ್ಯವಾದಗಳು: ಶಾರುಖ್​ ಖಾನ್​​

ಕೆಲ ದಿನಗಳ ಹಿಂದೆ ಅಮೆರಿಕದ ಖ್ಯಾತ ಟಿವಿ ಕಾರ್ಯಕ್ರಮ 'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ನಟ ರಾಮ್​​ ಚರಣ್​ ಭಾಗಿಯಾಗಿ ಸಿನಿಮಾ ಪ್ರಚಾರ ಮಾಡಿದ್ದರು. ನಮ್ಮ ಈ ಚಿತ್ರ ಸ್ನೇಹ ಮತ್ತು ಸಹೋದರತ್ವವನ್ನು ತೋರಿಸುತ್ತದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಇಬ್ಬರು ಚೆಲುವೆಯರೊಂದಿಗೆ ವಿನಯ್ ರಾಜ್​ಕುಮಾರ್ 'ಒಂದು ಸರಳ ಪ್ರೇಮಕಥೆ'

ಇದೇ ಮಾರ್ಚ್ 12 ರಂದು ಅಮೆರಿಕದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ನಾಟು ನಾಟು ಹಾಡಿನ​ ಪ್ರದರ್ಶನ ಇರಲಿದೆ. ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್ ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡು ಹಾಡಲಿದ್ದಾರೆ. ಈ ಕ್ಷಣಕ್ಕಾಗಿ ಭಾರತೀಯರು ಕಾದು ಕುಳಿತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.