ETV Bharat / entertainment

'90 ಬಿಡಿ ಮನೀಗ್ ನಡಿ' ಚಿತ್ರದ ಹೊಸ ಹಾಡು ಬಿಡುಗಡೆ.. ಬಿರಾದಾರ್​ ಜೊತೆ ಕರಿಸುಬ್ಬು, ಪ್ರಶಾಂತ್​ ಸಿದ್ದಿ ಸಖತ್​ ಸ್ಟೆಪ್​ - ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆ

ನಟ ಬಿರಾದಾರ್ ಅಭಿನಯದ '90 ಬಿಡಿ ಮನೀಗ್ ನಡಿ' ಚಿತ್ರದ ಮತ್ತೊಂದು ಹಾಡು ಇದೀಗ ಬಿಡುಗಡೆಯಾಗಿದೆ.

90 bidi manig nadi
'90 ಬಿಡಿ ಮನೀಗ್ ನಡಿ'
author img

By

Published : Jun 12, 2023, 7:45 PM IST

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಬಿರಾದಾರ್ ಅಭಿನಯದ ಐನೂರನೇ ಸಿನಿಮಾ '90 ಬಿಡಿ ಮನೀಗ್ ನಡಿ'. ಈ ಚಿತ್ರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಇದೀಗ 90 ಬಿಡಿ ಮನೀಗ್ ನಡಿ ಚಿತ್ರದ ಎಣ್ಣೆ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಿಂದೆ ಉತ್ತರ ಕರ್ನಾಟಕದ ನಾಟಿ ಶೈಲಿಯ ಸಿಂಗಲ್ ಕಣ್ಣಾ ಹಾರಸ್ತಿ..ಡಬ್ಬಲ್ ಹಾರನ್ ಬಾರಸ್ತಿ ಎಂಬ ಕಚಗುಳಿ ಇಡುವ ಜವಾರಿ ಹಾಡು ಬಿಟ್ಟು ಹಿಟ್ ಮಾಡಿಕೊಂಡಿತ್ತು.

70 ವರ್ಷ ವಯಸ್ಸಿನ ಬಿರಾದಾರ್, ಚಿತ್ರದ ನಾಯಕಿಯ ಜೊತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿತ್ತು. ಈಗ ಮತ್ತಷ್ಟು ಮುಂದುವರೆದಿರುವ ಚಿತ್ರತಂಡ ಇದೀಗ ಡಾ. ವಿ ನಾಗೇಂದ್ರ ಪ್ರಸಾದ್ ರಚನೆಯ, ಡಾ. ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಸಖತ್​ ಹಾಡೊಂದನ್ನು ಬಿಡುಗಡೆಗೊಳಿಸಿದೆ.

ಕಿರಣ್ ಶಂಕರ್ ಸಂಗೀತ ನಿರ್ದೇಶನವಿರುವ ಈ ಹಾಡು 'ಸಂಜೆ ಗಂಟ ಸುಮ್ನೆ ದುಡಿ.. ನೈಂಟಿ ಹೊಡಿ ಮನೀಗ್ ನಡಿ' ಎಂಬ ಸಾಲುಗಳಿಂದ ಪ್ರಾರಂಭಗೊಂಡು, 'ಸಂಜೆ ಆದ್ರೆ ಆಗು ರೆಡಿ.. ನೈಂಟಿ ಹೊಡಿ ಮನೀಗ್ ನಡಿ' ಎಂಬ ಸಾಲಿನ ಜೊತೆ ಸೇರಿಕೊಂಡು 'ಇವತ್ತೇ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ' ಎನ್ನುತ್ತಾ ಮಜವಾಗಿ ಕೊನೆಗೊಳ್ಳುತ್ತದೆ. ಇದೇ ಚಿತ್ರದ 'ಸಿಂಗಲ್ ಕಣ್ಣಾ' ಹಾಡಿಗೆ ಬಿರಾದಾರ್ ಜೊತೆ ಹೊಸ ಪ್ರಯೋಗ ಮಾಡಿ ಗೆದ್ದ ಭೂಷಣ್ ಇಲ್ಲಿಯೂ ಕೊರಿಯೋಗ್ರಾಫಿಯಲ್ಲಿ ಸದ್ದು ಮಾಡಿದ್ದಾರೆ.

ಇದನ್ನೂ ಓದಿ: Vasishta Simha: 'ಲವ್​ ಲಿ' ಟೈಟಲ್​ ಸಾಂಗ್​ ರಿಲೀಸ್​​.. ವಸಿಷ್ಠ ಸಿಂಹಗೆ ರವಿಚಂದ್ರನ್​, ಉಪೇಂದ್ರ ಸಾಥ್​

ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆಯಡಿ ರತ್ನಮಾಲ ಬಾದರದಿನ್ನಿ ನಿರ್ಮಿಸಿರುವ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಒಟ್ಟಿನಲ್ಲಿ ಮಜವಾದ ಸಾಹಿತ್ಯದ ಜೊತೆ ನಶೆ ಏರಿಸುವ ಎಣ್ಣೆ ಹಾಡಿಗೆ ನಟ ಬಿರಾದಾರ್ ಜೊತೆ ಕರಿಸುಬ್ಬು, ಪ್ರಶಾಂತ್ ಸಿದ್ದಿ ಸಖತ್ ಸ್ಟೆಪ್ ಹಾಕಿದ್ದು, ಹಾಡಿಗೊಂದು ಮೆರಗುಕೊಟ್ಟಿದ್ದಾರೆ. ಅಂದಹಾಗೆ ಇದೇ ಬರುವ 17 ರಂದು ಚಿತ್ರದ ಟ್ರೇಲರ್​ ಬಿಡುಗಡೆಯ ಸಿದ್ಧತೆಯಲ್ಲಿ ಚಿತ್ರತಂಡವಿದೆ.

ಸಿಂಗಲ್ ಕಣ್ಣಾ ಹಾರಸ್ತಿ ಸಾಂಗ್​ ಹಿಟ್​: 90 ಬಿಡಿ ಮನೀಗ್ ನಡಿ ಚಿತ್ರತಂಡ ಕೆಲವು ತಿಂಗಳ ಹಿಂದೆ ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ ಎಂಬ ಸಖತ್​ ಸಾಂಗ್​ ಅನ್ನು ಬಿಡುಗಡೆ ಮಾಡಿತ್ತು. ಈ ಹಾಡು 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಯಸ್ಸಿನಲ್ಲೂ ಬಿರಾದಾರ್ ಸೂಪರ್​ ಸ್ಟೆಪ್​ಗೆ​​ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ: Weekend with Ramesh: ಡಿಕೆಶಿ ಬದುಕಿನ ಅನಾವರಣದೊಂದಿಗೆ ಮುಕ್ತಾಯಗೊಂಡ ಸಾಧಕರ ಶೋ 'ವೀಕೆಂಡ್​ ವಿತ್​ ರಮೇಶ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.