ETV Bharat / entertainment

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿದ್ದ ಶರಣ್​ಗೆ ಇಂದು 51ನೇ ಜನ್ಮದಿನ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷನಾಗಿ ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಿದ ನಟ ಶರಣ್, ಕಾಮಿಡಿ ಪಾತ್ರಗಳನ್ನ ಮಾಡ್ತಾ ಈಗ ಪೈಸಾ ವಸೂಲ್‌ ಹೀರೋ ಆಗಿದ್ದಾರೆ. ಇಂದು 51ನೇ ವಸಂತಕ್ಕೆ ಕಾಲಿಟ್ಟಿರುವ ಶರಣ್ ತಮ್ಮ ಜನ್ಮದಿನವನ್ನು ಸಂಭ್ರಮಿಸುತ್ತಿದ್ದಾರೆ.

birthday celebration for actor Sharan  actor Sharan birthday 2023  actor Sharan movies  actor Sharan movie list  actor Sharan movie songs  ಹುಬ್ಬಳ್ಳಿಯಲ್ಲಿ ಹುಟ್ಟಿದ್ದ ಶರಣ್​ಗೆ ಇಂದು 51ನೇ ಜನ್ಮದಿನ  ಶರಣ್​ಗೆ ಇಂದು 51ನೇ ಜನ್ಮದಿನ ಸಂಭ್ರಮ  ಇಂದು 51ನೇ ವಸಂತಕ್ಕೆ ಕಾಲಿಟ್ಟಿರುವ ಶರಣ್  ಶರಣ್ ತಮ್ಮ ಜನ್ಮದಿನವನ್ನು ಸಂಭ್ರಮ  ಕಾಮಿಡಿ ಸ್ಟಾರ್ ಶರಣ್ ಅವರಿಗೆ ಇಂದು ಜನ್ಮದಿನ  ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್  ನಟ ಶರಣ್ 1972 ಫೆಬ್ರವರಿ 6ರಂದು ಜನಿಸಿದ್ದು  ಸ್ಯಾಂಡಲ್​ವುಡ್ ಅಧ್ಯಕ್ಷನಾಗಿ ಸಿನಿಪ್ರಿಯರ ಮನ ಗೆದ್ದಿರುವ  ಸಿನಿಪ್ರಿಯರ ಮನ ಗೆದ್ದಿರುವ ನಟ ಶರಣ್  ಛೂ ಮಂತರ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿದ್ದ ಶರಣ್​ಗೆ ಇಂದು 51ನೇ ಜನ್ಮದಿನ ಸಂಭ್ರಮ
author img

By

Published : Feb 6, 2023, 8:06 AM IST

ಹಾಸ್ಯದ ಮೂಲಕ ಕೋಟ್ಯಂತರ ಕನ್ನಡಿಗರನ್ನು ರಂಜಿಸಿರುವ ಕಾಮಿಡಿ ಸ್ಟಾರ್ ಶರಣ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. 1996ರಲ್ಲಿ 'ಪ್ರೇಮ ಪ್ರೇಮ ಪ್ರೇಮ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ ಇಂದು ಚಂದನವನದ ಕಾಮಿಡಿ ಸ್ಟಾರ್ ನಟರಾಗಿ ಉತ್ತುಂಗದಲ್ಲಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಕಾಮಿಡಿ ನಟನಾಗಿ ಕಾಣಿಸಿಕೊಂಡು ಚಿತ್ರ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸುತ್ತಿದ್ದ ಶರಣ್ ಈಗ ನಾಯಕ ನಟನಾಗಿ ಮಿಂಚುತ್ತಿದ್ದಾರೆ.

ಬ್ಲಾಕ್ ಬಸ್ಟರ್ 'ಅಧ್ಯಕ್ಷ' ಶರಣ್ ಸಿನಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಚಿತ್ರ. ಶರಣ್ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಕಲಾವಿದನಾಗಿ, ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದಾರೆ. 'ರ್‍ಯಾಂಬೋ' ಚಿತ್ರದಿಂದ ನಾಯಕನಾಗಿ ಮಿಂಚುತ್ತಿರುವ ಶರಣ್​ಗೆ ಇಂದು 51ನೇ ಜನ್ಮದಿನ. ನಟ ಶರಣ್ 1972 ಫೆಬ್ರವರಿ 6ರಂದು ಜನಿಸಿದ್ದು, ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಇದು ನಾನು ಹುಟ್ಟಿ ಬೆಳೆದ ನಾಡು, ನನ್ನ ಚಿಕ್ಕ ವಯಸ್ಸನ್ನು ಕಳೆದ ಊರು ಇದು. ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯಲ್ಲ ರೋಮಾಂಚನವಾಗುತ್ತದೆ ಎಂದು ನಟ ಶರಣ್ ಅವರು ನಟನೆ ಗುರು ಶಿಷ್ಯರು ಚಿತ್ರದ ಟ್ರೈಲರ್ ಲಾಂಚ್ ವೇಳೆ ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದ್ದರು.

ಇನ್ನು, ಸ್ಯಾಂಡಲ್​ವುಡ್ ಅಧ್ಯಕ್ಷನಾಗಿ ಸಿನಿಪ್ರಿಯರ ಮನ ಗೆದ್ದಿರುವ ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಸ್ಯ ನಟನಾಗಿ ಬಳಿಕ‌ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಯಶಸ್ಸು ಕಂಡಿರುವ ಶರಣ್ ಅವರು ಚಿತ್ರರಂಗದ ಪೈಸಾ ವಸೂಲ್ ಹೀರೋ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಅವತಾರ ಪುರುಷ ಬಳಿಕ ಶರಣ್ ಛೂ ಮಂತರ್ ಅನ್ನುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಬಹುತೇಕ ಶೂಟಿಂಗ್​​ ಮುಗಿಸಿರುವ ಛೂ ಮಂತರ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಛೂ ಮಂತರ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ದಿನ ಮಾತನಾಡಿದ ನಟ ಶರಣ್, ನಾನು ಚಿಕ್ಕವಯಸ್ಸಿನಿಂದಲೂ ಹಾರರ್ ಚಿತ್ರಗಳ ಅಭಿಮಾನಿ. ಸಾಕಷ್ಟು ಹಾರರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಮಿತ್ರ ತರುಣ್ ಸುಧೀರ್ ಈ ಚಿತ್ರದ ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ‌ ಸಹಜವಾಗಿ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ‌. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿರುವ ವಿಚಾರ ನಿಮಗೆ ಗೊತ್ತಿದೆ.

ತಮ್ಮ ಅಮೋಘ ‌ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ಶರಣ್ ಅವರ ಛೂ ಮಂತರ್ ಚಿತ್ರದಲ್ಲಿ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್​​ನಲ್ಲಿ ಬರುತ್ತಿರುವ ಚಿತ್ರ ಎಂದ ಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ.

ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಾಖಂಡ ಹಾಗೂ ಲಂಡನ್​​ನಲ್ಲಿ ಚಿತ್ರೀಕರಣ ನಡೆದಿದೆ. ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್(ಕೆ.ಜಿ.ಎಫ್ ಖ್ಯಾತಿ) ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ "ಛೂ ಮಂತರ್" ಚಿತ್ರಕ್ಕಿದೆ.

ಓದಿ: ಸ್ಯಾಂಡಲ್​ವುಡ್ ಅಧ್ಯಕ್ಷನ 'ಛೂ ಮಂತರ್' ಮೋಷನ್ ಪೋಸ್ಟರ್ ರಿಲೀಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.