ETV Bharat / entertainment

ನಿರಂಜನ್ ಶೆಟ್ಟಿ ಅಭಿನಯದ 31 DAYS ಚಿತ್ರದ ಫಸ್ಟ್ ಲುಕ್ ರಿವೀಲ್‌ - 31 DAYS ಚಿತ್ರದ ಫಸ್ಟ್ ಲುಕ್

ಯುವ ನಟ ನಿರಂಜನ್ ಶೆಟ್ಟಿ ಅಭಿನಯದ 31 DAYS ಚಿತ್ರದ ಫಸ್ಟ್ ಲುಕ್ ರಿವೀಲ್‌ ಆಗಿದೆ.

31 DAYS ಚಿತ್ರದ ಫಸ್ಟ್ ಲುಕ್
31 DAYS ಚಿತ್ರದ ಫಸ್ಟ್ ಲುಕ್
author img

By ETV Bharat Karnataka Team

Published : Jan 12, 2024, 2:43 PM IST

ಜಾಲಿಡೇಸ್‌ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ "31 DAYS" ಚಿತ್ರದ ಫಸ್ಟ್ ಲುಕ್ ಇತ್ತೀಚಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ ಚಿತ್ರಸಂತೆಯಲ್ಲಿ ಅನಾವರಣವಾಯಿತು. "31 DAYS" ಚಿತ್ರಕ್ಕೆ "ಹೈವೋಲ್ಟೇಜ್ ಲವ್ ಸ್ಟೋರಿ" ಎಂಬ ಅಡಿ ಬರಹವಿದ್ದು ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿದೆ.

31 DAYS ಚಿತ್ರದ ಫಸ್ಟ್ ಲುಕ್
31 DAYS ಚಿತ್ರದ ಫಸ್ಟ್ ಲುಕ್

ಇದೊಂದು ಪ್ರೇಮ ಕಥಾನಕವಾಗಿದ್ದು, ಚಿತ್ರಸಂತೆಗೆ ಆಗಮಿಸಿದ್ದ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ವಿಶೇಷ. ಶೀರ್ಷಿಕೆಯನ್ನು ಯುವ ಪ್ರೇಮಿಗಳು ಬಿಡುಗಡೆ ಮಾಡಿದರು. ಅಲ್ಲಿ ನೆರದಿದ್ದ ಸಹಸ್ರಾರು ಕಲಾಸಕ್ತರು "31 DAYS" ಚಿತ್ರದ ವಿನೂತನ ಫಸ್ಟ್ ಲುಕ್​ಗೆ ಫಿದಾ ಆದರು.

"ನಾನು ಸಹ ಚಿತ್ರಕಲಾ ಪರಿಷತ್​ನ ವಿದ್ಯಾರ್ಥಿಯಾಗಿದ್ದು, ಚಿತ್ರಸಂತೆಯಲ್ಲಿ ನಮ್ಮ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆಯಾಗಿದ್ದು ಖುಷಿಯಾಗಿದೆ" ಎಂದು ನಾಯಕ ನಿರಂಜನ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದರು. Nstar ಬ್ಯಾನರ್​​ನಲ್ಲಿ ನಾಗವೇಣಿ ಮತ್ತು ಎನ್​​ ಶೆಟ್ಟಿ ಅವರು ನಿರ್ಮಿಸುತ್ತಿರುವ "31DAYS" ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. ಹೆಬ್ರಿ, ಆಗುಂಬೆ, ತೀರ್ಥಹಳ್ಳಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದ್ದು ಭಾಗಶಃ ಚಿತ್ರದ ಚಿತ್ರೀಕರಣ ಮುಗಿದೆ. ನಿರಂಜನ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಅವರಿಗೆ ಪ್ರಜ್ವಲಿ ಸುವರ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್ ಲುಕ್ ಸೊಗಸಾಗಿ ಮೂಡಿ ಬಂದಿದ್ದು ನೆಟಿಜನ್​ಗಳ ಗಮನ ಸೆಳೆಯುತ್ತಿದೆ.

31 DAYS ಚಿತ್ರದ ಫಸ್ಟ್ ಲುಕ್
31 DAYS ಚಿತ್ರದ ಫಸ್ಟ್ ಲುಕ್

"31 DAYS" ಚಿತ್ರ ಪ್ರಸ್ತುತ ಜನರೇಷನ್​​ನಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಥೆ ಆಗಿದ್ದು, 31 ದಿನಗಳಲ್ಲಿ ನಡೆಯುವ high voltage love story ಇದಾಗಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿ. ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150ನೇ ಚಿತ್ರವೂ ಹೌದು. ವಿನುತ್ ಕೆ ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ಅವರ ಸಂಕಲನ ಈ ಚಿತ್ರಕ್ಕಿದೆ.

31 DAYS ಚಿತ್ರದ ಫಸ್ಟ್ ಲುಕ್
31 DAYS ಚಿತ್ರದ ಫಸ್ಟ್ ಲುಕ್

ಇದನ್ನೂ ಓದಿ: 'ನಾನು ಮತ್ತು ಗುಂಡ 2' ಸಿನಿಮಾಗೆ ರಾಕೇಶ್​ ಅಡಿಗ ನಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.