ಬಾಲಿವುಡ್ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವಿವಾಹೋತ್ಸವ ಗೌಪ್ಯತೆಯ ಮಧ್ಯೆಯೇ ಬಾಂದ್ರಾದ ಮನೆಯಲ್ಲಿ ಸ್ನೇಹಿತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಂದು ನೆರವೇರಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಂತಿಮವಾಗಿ ಪರಸ್ಪರ ವಿವಾಹದ ಪ್ರತಿಜ್ಞೆ ವಿನಿಮಯ ಮಾಡಿಕೊಂಡರು. ಈಗ ಅವರು ಅಧಿಕೃತವಾಗಿ ಗಂಡ ಮತ್ತು ಹೆಂಡತಿಯಾಗಿದ್ದಾರೆ. ಮದುವೆಯಲ್ಲಿ ನೀತು ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಶಾಹೀನ್ ಭಟ್ ಮತ್ತು ಇತರರು ಭಾಗವಹಿಸಿದ್ದರು.
ರಣಬೀರ್ ಮತ್ತು ಆಲಿಯಾ ಮದುವೆ ಸಮಾರಂಭ ಮುಗಿದಿದ್ದು, ಸಂಜೆ 7 ಗಂಟೆಯ ನಂತರ ಮಾಧ್ಯಮಗಳ ಮುಂದೆ ಪತಿ- ಪತ್ನಿಯರಾಗಿ ಬಂದು ವಿವಾಹವನ್ನು ತಾವೇ ಬಹಿರಂಗಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ರಣಬೀರ್ ಮತ್ತು ಆಲಿಯಾ ಅವರ ಮದುವೆಯ ಫೋಟೋಗಳಿಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಆರತಕ್ಷತೆ ಮುಂದಿನ ದಿನಗಳಲ್ಲಿ ನಡೆಸುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಇಡೀ ಬಾಲಿವುಡ್ ಬಳಗವನ್ನು ನವಜೋಡಿ ಆಹ್ವಾನಿಸಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ರಣಬೀರ್-ಅಲಿಯಾ ಮದುವೆ ಮುನ್ನ 43 ವರ್ಷ ಹಿಂದಿನ ಫೋಟೋ ಹಂಚಿಕೊಂಡ ನೀತು ಕಪೂರ್