ETV Bharat / entertainment

Grammys Awards 2023: ಭಾರತೀಯ ಡಿಸೈನರ್​ ವಿನ್ಯಾಸಿತ ಧಿರಿಸು ತೊಟ್ಟು ಕಂಗೊಳಿಸಿದ ಕಾರ್ಡಿ ಬಿ

author img

By

Published : Feb 6, 2023, 5:10 PM IST

ಭಾರತೀಯ ವಸ್ತ್ರ ವಿನ್ಯಾಸಕ ಗೌರವ್​ ಗುಪ್ತಾ ಅವರ ವಿನ್ಯಾಸಿತ ಗೌನ್​ನಲ್ಲಿ ಕಾರ್ಡಿ ಬಿ ಕಂಡು ಬಂದಿದ್ದಾರೆ. ವಿಶೇಷ ಅಂದರೆ, ಈ ಬಾರಿ ಅವರು ಯಾವುದೇ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರಲಿಲ್ಲ

Grammys Awards 2023: ಭಾರತೀಯ ಡಿಸೈನರ್​ ವಿನ್ಯಾಸಿತ ಧಿರಿಸು ತೊಟ್ಟು ಕಂಗೊಳಿಸಿದ ಕಾರ್ಡಿ ಬಿ
Cardi B dressed dress designed by an Indian designer

ಲಾಸ್​ ಏಂಜಲ್ (ಅಮೆರಿಕ): ಸಂಗೀತ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನಕ್ಕಾಗಿ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಪ್ರಮುಖವಾದದ್ದ ಗ್ರ್ಯಾಮಿ ಆವಾರ್ಡ್​. ಈ ಬಾರಿ ಗ್ರ್ಯಾಮಿ ಆವಾರ್ಡ್​ನಲ್ಲಿ ಪ್ರಶಸ್ತಿಗಳ ಹೊರತಾಗಿ ವಿಶೇಷವಾಗಿ ಗಮನ ಸೆಳೆದವರು ಕಾರ್ಡಿ ಬಿ ಅವರು. ಭಾರತೀಯ ವಸ್ತ ವಿನ್ಯಾಸ ಗೌರವ್​ ಗುಪ್ತ ವಿನ್ಯಾಸಿತ ಗೌನ್​ ತೊಟ್ಟು ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದರು. ಕಡು ನೀಲಿ ಬಣ್ಣದ, ನೆರಿಗೆಯ ಹೊಂದಿರುವ ಹೂವಿನ ಆಕಾರದ ಗೌನ್​​ ಎಲ್ಲರ ಚಿತ್ತಾಕರ್ಷಕವಾಗಿತ್ತು. ಸ್ಲಿಕ್​ ಸರ್ಕ್​ ಮತ್ತು ಡ್ರಾಮಾಟಿಕ್​ ಟ್ರೈನ್​ ಮಾದರಿಯ ಈ ವಿಶೇಷ ಗೌನ್​ ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಇನ್ನು ಈ ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಕಾರ್ಡಿ ಬಿ ನಾಮ ನಿರ್ದೇಶಿತಗೊಂಡಿರಲಿಲ್ಲ. ಆದರೂ ಕೂಡ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಿಂಚು ಹರಿಸಿದರು.

ಕಾರ್ಡಿ ಬಿ
ಕಾರ್ಡಿ ಬಿ

ಭಾರತೀಯ ಡಿಸೈನರ್​ನಿಂದ ವಿನ್ಯಾಸ: ಇನ್ನು ಭಾರತದ ವಸ್ತ್ರ ವಿನ್ಯಾಸಕ ಗೌರವ್​ ಗುಪ್ತಾ ಈ ಅಪರೂಪದ ಡ್ರೆಸ್​ ವಿನ್ಯಾಸ ಮಾಡಿದ್ದಾರೆ. ಗೌರವ್​ ಗುಪ್ರಾ ವಿನ್ಯಾಸದ ಬಟ್ಟೆಯನ್ನು ಕಾರ್ಡಿ ಬಿ ಇದೇ ಮೊದಲ ಬಾರಿಯೇನು ತೊಟ್ಟಿಲ್ಲ. ಈ ಇಬ್ಬರು ಹಲವು ಯೋಜನೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಹಿಂದೆ ತಮ್ಮ ಮ್ಯೂಸಿಕ್​ ವಿಡಿಯೋ ನೋ ಲವ್​ನಲ್ಲಿ ಗುಪ್ತಾ ವರ ವಿನ್ಯಾಸಿತ ಬಟ್ಟೆಯನ್ನು ಅವರು ತೊಟ್ಟಿದ್ದರು. ತಮ್ಮ ವಸ್ತ್ರದ ಮೂಲಕ ಕಾರ್ಡಿ ಗಾಳಿ ಅಂಶವನ್ನು ಪ್ರತಿನಿಧಿಸಿದ್ದಾರೆ. ಈ ಬ್ರ್ಯಾಂಡ್‌ನ ಹಿಂದೆ ಸ್ಥಳೀಯ ಶಿಲ್ಪಕಲೆ ತಂತ್ರವು ಅನಂತ ಆಕಾರಗಳಾಗಿ ರೂಪಾಂತರಗೊಂಡಿದೆ. ಕಾರ್ಡಿ ಕಾಸ್ಮಿಕ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಲಾಗಿದೆ.

ಈ ಬಾರಿ ಗ್ರಾಮ್ಯಿ ಅವಾರ್ಡ್​ ಅನ್ನು ತ್ರೆವೊರ್​ ನೊಹಾ ನಿರೂಪಣೆ ಮಾಡಿದ್ದಾರೆ. ಕಫ್​ ಇಟ್​ನ ಆರ್​ ಅಂಡ್​ ಬಿ ಹಾಡಿಗೆ ಬೆಯೊನ್ಸ್​​ ಪ್ರಶಸ್ತಿ ಗೆದ್ದಿದ್ದು, 31ನೇ ಬಾರಿ ಅವರು ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ. 2023ರ ಗ್ರ್ಯಾಮಿ ಪ್ರಶಸ್ತಿಯನ್ನು 9 ರಲ್ಲಿ ಬೆಯಾನ್ಸ್​​ ನಾಮ ನಿರ್ದೇಶನಗೊಂಡಿದ್ದಾರೆ. ಅದರಲ್ಲಿ ನಾಲ್ಕರಲ್ಲಿ ಅವರು ಪ್ರಶಸ್ತಿ ಪಡೆದಿದ್ದಾರೆ. ಗ್ರ್ಯಾಮಿ ಅವಾರ್ಡ್​ ಇತಿಹಾಸದಲ್ಲೇ ಸೋಲೋ ಆರ್ಟಿಸ್ಟ್​​ ಆಗಿ ಅತಿ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಮೂರು ಆವಾರ್ಡ್​ ಅನ್ನು ಜಂಟಿಯಾಗಿ ಪಡೆದಿದ್ದಾರೆ.

ಕೆಂಡ್ರಿಕ್​ ಲರ್ನರ್​ 8 ನಾಮಿನೇಷನ್​ನಲ್ಲಿ 2 ಪ್ರಶಸ್ತಿಯನ್ನು ಪಡೆದಿದ್ದಾರೆ. ಅಡೆಲೆ ಮತ್ತು ಬ್ರಾಂಡಿ ಕಾರ್ಲಿಲೈ ಏಳು ಪ್ರಶಸ್ತಿಯನ್ನು ಪಡೆದಿದ್ದಾರೆ. ಹ್ಯಾರಿ ಸ್ಟೈಲ್ಸ್, ಮೇರಿ ಜೆ. ಬ್ಲಿಜ್, ಡಿಜೆ ಖಲೀದ್ ಮತ್ತು ರಾಂಡಿ ಮೆರಿಲ್ ಅವರು ಆರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.

ಕಾರ್ಡಿ ಬಿ
ಕಾರ್ಡಿ ಬಿ

ಕೆಂಡ್ರಿಕ್ ಲಾಮರ್ ಎಂಟು ನಾಮನಿರ್ದೇಶನ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಅಡೆಲೆ ಮತ್ತು ಬ್ರಾಂಡಿ ಕಾರ್ಲೈಲ್ ಇಬ್ಬರೂ ಏಳಕ್ಕೆ ನಾಮನಿರ್ದೇಶನಗೊಂಡಿದ್ದಾರೆ. ಫ್ಯೂಚರ್, ಹ್ಯಾರಿ ಸ್ಟೈಲ್ಸ್, ಮೇರಿ ಜೆ. ಬ್ಲಿಜ್, ಡಿಜೆ ಖಲೀದ್ ಮತ್ತು ರಾಂಡಿ ಮೆರಿಲ್ ಅವರು ಆರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕನ್ನಡಿಗ ರಿಕಿ ಕೇಜ್​ಗೆ ಮೂರನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಿಕಿ ಅವರ 'ಡಿವೈನ್ ಟೈಡ್ಸ್‌' ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ: ಗ್ರ್ಯಾಮಿ ಪ್ರದಾನ: 32ನೇ ಪ್ರಶಸ್ತಿ ಗೆದ್ದ ಗಾಯಕಿ ಬೆಯಾನ್ಸ್ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.