ಬೆಂಗಳೂರು: ದೇಶಾದ್ಯಂತ ನಡೆಯುತ್ತಿರುವ ಎರಡನೇ ಹಂತದ ಮತದಾನದ ವೇಳೆ ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.
ಚಾಮರಾಜನಗರದ 48ನೇ ಬೂತ್ನಲ್ಲಿ ಚುನಾವಣಾ ಕರ್ತವ್ಯ ಮೇಲಿದ್ದ ಎಸ್. ಶಾಂತಮೂರ್ತಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಛತ್ತೀಸ್ಗಢದಲ್ಲಿ ಸಹ ಚುನಾವಣೆ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಂಕರ್ ಲೋಕಸಭಾ ಕ್ಷೇತ್ರದ ಆಂತಗಢ್ ಪ್ರದೇಶದ ಕಾಮ್ತಾ ಬೂತ್ ನಂ.186 ಅಧಿಕಾರಿಯಾಗಿದ್ದ ತುಕಲು ರಾಮ್ ನರೇಟಿ ಎಂಬುವರು ಸರ್ಕಾರಿ ಶಾಲೆಯ ಸಹಾಯಕ ಶಿಕ್ಷಕರಾಗಿ ನೇಮಕಗೊಂಡಿದ್ದರು. ಇಂದು ಮತದಾನದ ಕರ್ತವ್ಯದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಪುರ್ ಜಿಲ್ಲೆ ವ್ಯಾಪ್ತಿಯಲ್ಲಿ ನಕ್ಸಲ್ ಜಿಲ್ಲಾ ಮೀಸಲು ಕಾವಲು ಪಡೆ (ಡಿಆರ್ಜಿ) ಅರಣ್ಯದಲ್ಲಿ ಬಿರುಸಿನ ಕೂಂಬಿಂಗ್ ನಡೆಸುತ್ತಿತ್ತು. ಈ ವೇಳೆ ಶಂಕಿತ ಇಬ್ಬರನ್ನು ಹೊಡೆದು ಉರುಳಿಸಲಾಗಿದೆ ಎಂದು ಸ್ಥಳೀಯ ಹಿರಿಯ ಪೊಲೀಸ ಅಧಿಕಾರಿ ತಿಳಿಸಿದ್ದಾರೆ.