ಕೋಲಾರ: ವಿದ್ಯುತ್ ಕಂಬ ನಿಲ್ಲಿಸುವ ಸಂದರ್ಭ ಕಂಬ ಮೈಮೇಲೆ ಬಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಇದನ್ನೂ ಓದಿ: ಸಿಗ್ನಲ್ ಜಂಪ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಎಎಸ್ಐ ಜತೆ ಮಹಿಳೆಯ ರಂಪಾಟ - ವಿಡಿಯೋ
ಮುಳಬಾಗಿಲು ತಾಲೂಕಿನ ರಾ.ಹೆ 75 ರ ಜಮ್ಮನಹಳ್ಳಿ ಗೇಟ್ ಬಳಿ ವಿದ್ಯುತ್ ಕಂಬವನ್ನು ಕ್ರೇನ್ ಮೂಲಕ ಮೇಲಕ್ಕೆತ್ತುತ್ತಿದ್ದಾಗ ಆಯತಪ್ಪಿ ಕಂಬ ಯುವಕನ ಮೇಲೆ ಬಿದ್ದಿದೆ. ಪರಿಣಾಮ, ಶಿರಸಿ ಮೂಲದ ಪರಶುರಾಮ್ (18) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈತನ ಸಹೋದರ ವಿದ್ಯುತ್ ಕಂಬಗಳನ್ನು ಜೋಡಿಸುವ ಗುತ್ತಿಗೆ ಕಾಮಗಾರಿಯಲ್ಲಿ ತೊಡಗಿದ್ದು, ಸಹೋದರನನ್ನು ನೋಡಲು ಬಂದಾಗ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.