ETV Bharat / crime

ಚಲಿಸುತ್ತಿದ್ದ ಕಾರಿನಿಂದ ಮಹಿಳೆ ಮೃತದೇಹ ರಸ್ತೆಗೆ ಎಸೆತ; ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ - ತಮಿಳುನಾಡಿನ ಕೊಯಮತ್ತೂರು,

ಸ್ಕಾರ್ಪಿಯೋ ಕಾರಿನಲ್ಲಿ ಬಂದ ಕಿಡಿಗೇಡಿಗಳು ಕಾರು ಚಲಿಸುತ್ತಿದ್ದಾಗಲೇ ಮಹಿಳೆಯ ಮೃತದೇಹವನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿರುವ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

woman's body thrown away from car - shocking cctv footage
ಚಲಿಸುತ್ತಿದ್ದ ಕಾರಿನಿಂದ ಮಹಿಳೆ ಮೃತ ದೇಹ ರಸ್ತೆಗೆ ಎಸೆತ; ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ
author img

By

Published : Sep 7, 2021, 3:53 PM IST

Updated : Sep 7, 2021, 4:19 PM IST

ಕೊಯಮತ್ತೂರು(ತಮಿಳುನಾಡು): ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನಿಂದ ಮಹಿಳೆಯ ಮೃತದೇಹವನ್ನು ರಸ್ತೆಗೆ ಎಸೆದಿರುವ ಘಟನೆ ಕೊಯಮತ್ತೂರಿನ ಅವಿನಾಶ್‌ ರಸ್ತೆಯ ಚಿನ್ನಿಯಂಪಾಳ್ಯಂನಲ್ಲಿ ನಡೆದಿದೆ. ಸೋಮವಾರ ಮುಂಜಾನೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತದೇಹ ಎಸೆಯುತ್ತಿರುವ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಲಿಸುತ್ತಿದ್ದ ಕಾರಿನಿಂದ ಮಹಿಳೆ ಮೃತದೇಹ ರಸ್ತೆಗೆ ಎಸೆತ; ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯ ಸೆರೆ

ಕೆಲಕಾಲ ರಸ್ತೆಯಲ್ಲೇ ಬಿದ್ದಿದ್ದ ಅಪರಿಚಿತ ಮೃತದೇಹವನ್ನು ಗಮನಿಸಿದ ವಾಹನ ಸವಾರರು ಪೀಲಮೇಡು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೊಯಮತ್ತೂರು ಮೆಡಿಕಲ್‌ ಕಾಲೇಜಿಗೆ ರವಾನಿಸಿದ್ದಾರೆ.

ರಸ್ತೆ ಅಪಘಾತ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೀಲಮೇಡು ಠಾಣಾ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Last Updated : Sep 7, 2021, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.