ETV Bharat / crime

ಆಂಧ್ರ ಸಿಎಂ ನಿವಾಸದ ಕೂಗಳತೆಯಲ್ಲಿ ದೃಷ್ಟಿವಿಕಲಚೇತನ ಬಾಲಕಿಗೆ ಚಾಕು ಇರಿತ,ಸಾವು: ಆರೋಪಿ ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ - ಬಾಲಕಿ ಚಿಕ್ಕಮ್ಮನ ಮನೆಯಲ್ಲಿ ವಾಸ

ಅಮರಾವತಿಯಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಅಧಿಕೃತ ನಿವಾಸದಿಂದ ಕೂಗಳತೆಯಲ್ಲಿ ವಾಸವಿದ್ದ ದೃಷ್ಟಿ ವಿಕಲಚೇತನ ಬಾಲಕಿಗೆ ವ್ಯಕ್ತಿ ಚಾಕು ಇರಿತ, ಗಂಭೀರ ಗಾಯ - ಬಾಲಕಿಗೆ ಚಿಕಿತ್ಸೆ ಫಲಿಸದ ಪರಿಣಾಮ ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು - ಆರೋಪಿಯನ್ನು ಇನ್ನೂ ಬಂಧಿಸದ ಪೊಲೀಸರು, ಜನರ ಆಕ್ರೋಶ

Allegation related to the blind girl
ಸಾವಿಗೀಡಾದ ದೃಷ್ಟಿವಿಕಲಚೇತನ ಬಾಲಕಿ ಸಂಬಂಧಿ ಆರೋಪ .
author img

By

Published : Feb 14, 2023, 7:51 PM IST

ತಾಡೆಪಲ್ಲಿ(ಅಮರಾವತಿ):ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಅಧಿಕೃತ ನಿವಾಸದಿಂದ ಕೂಗಳತೆಯಲ್ಲಿ ದೃಷ್ಟಿ ವಿಕಲಚೇತನ ಬಾಲಕಿಗೆ ವ್ಯಕ್ತಿಯೊಬ್ಬನು ಚಾಕುವಿನಿಂದ ಇರಿದಿರುವ ಘಟನೆ ಗುಂಟೂರು ಜಿಲ್ಲೆಯ ಎನ್​​​ಟಿಆರ್​​ಕಟ್ಟಾದಲ್ಲಿ ನಡೆದಿದೆ. ಆರೋಪಿ ನಾಗಪೋಗು ದಯಾನಂದರಾಜು ಅಲಿಯಾಸ್ ಕುಕ್ಕಲರಾಜು (30) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 9.30ರ ಸುಮಾರಿಗೆ ದೃಷ್ಟಿ ವಿಕಲಚೇತನ ಬಾಲಕಿ ಒಬ್ಬಳೇ ಇದ್ದ ಸಮಯದಲ್ಲಿ ಮನೆಗೆ ನುಗ್ಗಿದ ಆರೋಪಿ ರಾಜು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಚಾಕು ಇರಿತದಿಂದ ಕೆಳಗೆ ಬಿದ್ದಿದ್ದ ಬಾಲಕಿಯನ್ನೂ ನೋಡಿದ ಅಕ್ಕಪಕ್ಕದವರು ತಾಯಿಗೆ ಮಾಹಿತಿ ನೀಡಿದ್ದು, ಅವರು ತಾಯಿ ,ಚಿಕ್ಕಮ್ಮ ಬಂದು ನೋಡಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನೂ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಕಾರಣ ಸೋಮವಾರ ಬೆಳಗ್ಗೆ 5.30ಕ್ಕೆ ಮೃತಪಟ್ಟಿದ್ದಾಳೆ.ರಾತ್ರಿ ಮನೆಗೆ ಹಿಂದಿರುಗಿದಾಗ ಘಟನೆಯ ಬಗ್ಗೆ ತಿಳಿದ ನಂತರ, ಹುಡುಗಿಯ ತಾಯಿ ರಾಜುವನ್ನು ಪ್ರಶ್ನಿಸಿ, ಅವನ ವಿರುದ್ಧ ಆರೋಪ ಮಾಡಿದ್ದಳು, ಆದರೆ ಅವನು ಅದನ್ನು ನಿರಾಕರಿಸಿದ್ದನು.

ಆರೋಪಿ ಕಿರುಕುಳ ನೀಡುತ್ತಿದ್ದ, ಆರೋಪ: ಬಾಲಕಿಯ ತಾಯಿ ಮತ್ತು ಚಿಕ್ಕಮ್ಮ ಕೆಲಸಕ್ಕೆ ಹೋದ ನಂತರ ಆರೋಪಿ ರಾಜು ಅವರ ಮನೆಗೆ ಬಂದು ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಈ ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದ್ದು, ಆರೋಪಿ ರಾಜು ಈ ಪ್ರದೇಶದಲ್ಲಿ 13 ವರ್ಷದ ಇನ್ನೊಬ್ಬಳ ಬಾಲಕಿಗೆ ಕಿರುಕುಳ ನೀಡಿದ್ದನು ಎಂದು ತಿಳಿಸಿದ್ದಾರೆ.

ಬಾಲಕಿ ಚಿಕ್ಕಮ್ಮನ ಮನೆಯಲ್ಲಿ ವಾಸ: ಏಳನೇ ವಯಸ್ಸಿನಲ್ಲಿ ತನ್ನ ಕಣ್ಣು ಕಳೆದುಕೊಂಡಿದ್ದ 17 ವರ್ಷದ ಬಾಲಕಿ ಹಾಗೂ ತಾಯಿ ಅವರು ಚಿಕ್ಕಮ್ಮನೊಂದಿಗೆ ತಾಡೇಪಲ್ಲಿಯಲ್ಲಿ ವಾಸವಿದ್ದರು. ಗನ್ನವರಂ ಬಳಿ ವಾಸವಿದ್ದ ವೇಳೆ ಆಕೆಯ ತಂದೆ ಚಿಕ್ಕವಳಿದ್ದಾಗ ಆಕೆಯನ್ನು ಬಿಟ್ಟು ಹೋಗಿದ್ದು, ತಾಯಿ ಮನೆಗೆಲಸ ಮಾಡಿಕೊಂಡು ಅವಳನ್ನು ಸಾಕುತ್ತಿದ್ದಳು.

ಅಪರಾಧ ಕೃತ್ಯ ಮಾಡಿದ್ದರೂ ಕ್ರಮ ಕೈಗೊಳ್ಳದ ಪೊಲೀಸರು: ಅಪರಾಧ ಹಿನ್ನೆಲೆಯುಳ್ಳವನಾಗಿದ್ದ ರಾಜು ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆರೋಪಿಯೂ ಮೂರು ವರ್ಷಗಳ ಹಿಂದೆ ಪೊಲೀಸ್ ಹೆಡ್ ಕಾನ್ಸ್​ಟೇಬಲ್​​ ಮೇಲೆ ಹಲ್ಲೆ ನಡೆಸಿದ್ದನು. ಆತನ ವಿರುದ್ಧ ಕೊಲೆಗೆ ಯತ್ನ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದನು. ಈ ಹಿಂದೆ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈ ಘಟನೆ ತಡೆಯಬಹುದಿತ್ತು ಎಂದು ಸಂತ್ರಸ್ತೆ ಸಂಬಂಧಿಕರು ತಿಳಿಸಿದ್ದಾರೆ.

ಈ ಪ್ರದೇಶವು ಸಿಎಂ ನಿವಾಸದ ಸಮೀಪ ಆಗಿದ್ದರೂ ಪೊಲೀಸ್​ರ ಭದ್ರತಾ ಲೋಪದ ಆರೋಪವನ್ನು ಹುಟ್ಟುಹಾಕಿದೆ. ಮಾದಕ ವಸ್ತುಗಳನ್ನು ಸುಲಭವಾಗಿ ಪ್ರವೇಶಿಸಲು, ಮಾದಕ ವ್ಯಸನಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ, ಕಠಿಣ ಕ್ರಮ ಕೈಗೊಳ್ಳದ ಪೊಲೀಸರ ನಿಷ್ಕ್ರಿಯತೆ ವಿರುದ್ಧ ಹಲವಾರು ದೂರುಗಳು ಕೇಳಿ ಬರುತ್ತಿವೆ.

ದೃಷ್ಟಿ ವಿಕಲಚೇತನ ಬಾಲಕಿಗೆ ಚಾಕು ಇರಿತದ ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ಬಾಲಕಿಯ ಸಾವಿನ ನಂತರ ಆಕೆಯ ಕುಟುಂಬದವರಿಂದ ಪೊಲೀಸರು ವಿವರಗಳನ್ನು ಮಾತ್ರ ಪಡೆದುಕೊಂಡಿದ್ದಾರೆ ಎಂದು ಸಾವಿಗೀಡಾದ ಬಾಲಕಿ ಕುಟುಂಬ ದೂರಿದೆ.

ಅಪರಾಧಿಗಳ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು :ಈ ಹಿಂದೆ ಸಿಎಂ ನಿವಾಸದ ಹತ್ತಿರದಲ್ಲಿ ವಾಸವಿದ್ದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ನಡೆದಿತ್ತು.ಜೂನ್ 20, 2021ರಂದು ತನ್ನ ಭಾವಿ ಪತಿಯೊಂದಿಗೆ ಕೃಷ್ಣಾ ನದಿಯ ದಡದಲ್ಲಿ ವಿಹಾರಕ್ಕೆ ಬಂದಿದ್ದ ಯುವತಿಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆ ಘೋರ ಅಪರಾಧದ ಎರಡನೇ ಆರೋಪಿ ರಾಮಲಿಂಗಂ ವೆಂಕಟ ಪ್ರಸನ್ನ ರೆಡ್ಡಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಆರೋಪಿಗಳು ಗಾಂಜಾ ಕುಡಿದು ಈ ಕೃತ್ಯ ಎಸಗಿದ್ದರು.

ಇದನ್ನೂಓದಿ:ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್​ನಲ್ಲಿ ಶವ ಬಚ್ಚಿಟ್ಟ ಯುವಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.