ರಾಯಚೂರು: ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರಿಬ್ಬರು ಕಾಣೆಯಾಗಿರುವ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಾನಂದ ಎನ್ನುವ 9 ವರ್ಷದ ವರುಣ, 5 ವರ್ಷದ ಸಣ್ಣಯ್ಯ ಸಹೋದರರಿಬ್ಬರು ನಿನ್ನೆ ಸಂಜೆ ವೇಳೆ ಕಾಣೆಯಾಗಿದ್ದಾರೆ. ಮನೆಯ ಮುಂದೆ ಇಬ್ಬರು ಸಹೋದರರು ಆಟವಾಡುತ್ತಿದ್ದರು. ಏಕಾಏಕಿ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.
ಸಿರವಾರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬಾಲಕರಿಬ್ಬರನ್ನ ಹುಡಕಾಟ ನಡೆಸುತ್ತಿದ್ದಾರೆ. ಕಾಣೆಯಾಗಿದ್ದ ಇಬ್ಬರು ಬಾಲಕರು ಮಾಜಿ ಶಾಸಕ ಹಂಪಯ್ಯ ನಾಯಕ ಮೊಮ್ಮಕ್ಕಳಾಗಿದ್ದಾರೆ. ಮಕ್ಕಳ ಪತ್ತೆಗಾಗಿ ಸಹಕರಿಸುವಂತೆ ಪೋಟೋವನ್ನ ವಾಟ್ಸ್ಆ್ಯಪ್ನಲ್ಲಿ ಹರಿ ಬಿಡಲಾಗಿದೆ.
ಬಾಲಕರಿಬ್ಬರು ಎಲ್ಲಿಯಾದರೂ ಕಂಡು ಬಂದರೆ ಸಿರವಾರ ಪೊಲೀಸ್ ಠಾಣೆ ಅಥವಾ ಈ ನಂಬರ್ಗೆ (9741434220) ಕರೆ ಮಾಡುವಂತೆ ಕೋರಲಾಗಿದೆ.