ETV Bharat / crime

ತಂಗಿಯ ಮೇಲೆ ಅಣ್ಣನಿಂದಲೇ ಲೈಂಗಿಕ ದೌರ್ಜನ್ಯ.. ಪೋಕ್ಸೋ ಪ್ರಕರಣ ದಾಖಲಿಸಿದ ಪೊಲೀಸರು - ದೊಡ್ಡಪ್ಪನ ಮಗನೇ ಲೈಂಗಿಕ ದೌರ್ಜನ್ಯ

ಶಾಲೆಯಲ್ಲಿ ಸೈಬರಾಬಾದ್​ ಪೊಲೀಸರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ನೆರವು ಕಂಡ ಬಾಲಕಿ ಈ ವಿಷಯವನ್ನು ತಿಳಿಸಿದ್ದಾರೆ. ಕಳೆದ ಕೆಲವು ವರ್ಷದಿಂದ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಶಾಲೆಯ ಟೀಚರ್​ಗೆ ವಿದ್ಯಾರ್ಥಿನಿ ತಿಳಿಸಿದ್ದು, ಬಳಿಕ ಟೀಚರ್​ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಂಗಿಯ ಮೇಲೆ ಅಣ್ಣನಿಂದಲೇ ಲೈಂಗಿಕ ದೌರ್ಜನ್ಯ; ಪೋಸ್ಕೋ ಪ್ರಕರಣ ದಾಖಲಿಸಿದ ಪೊಲೀಸರು
sexual-assault-on-sister-by-elder-brother-police-have-registered-a-case-against-posco
author img

By

Published : Dec 17, 2022, 11:20 AM IST

ಹೈದರಾಬಾದ್​: ಅಪ್ರಾಪ್ತೆಗೆ ಅಣ್ಣನೇ ವಿಲನ್​ ಆಗಿ ದುಷ್ಕೃತ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಸಂಬಂಧಿ ಮನೆ ಸೇರಿದ ಬಾಲಕಿಗೆ ದೊಡ್ಡಪ್ಪನ ಮಗನೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಅಣ್ಣನ ಈ ಪೈಶಾಚಿಕ ಕೃತ್ಯವನ್ನು ಅನುಭವಿಸಿದ ಬಾಲಕಿ ಯಾರಿಗೆ ಹೇಳಬೇಕು ಎಂದು ತಿಳಿಯದೇ ಇದನ್ನೆಲ್ಲಾ ಸಹಿಸಿಕೊಂಡಿದ್ದಳು.

ಶಾಲೆಯಲ್ಲಿ ಸೈಬರಾಬಾದ್​ ಪೊಲೀಸರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಾಗ ನೆರವು ಕೋರಿದ ಬಾಲಕಿ ಈ ವಿಷಯವನ್ನು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಶಾಲೆಯ ಟೀಚರ್​ಗೆ ವಿದ್ಯಾರ್ಥಿನಿ ತಿಳಿಸಿದ್ದು, ಬಳಿಕ ಟೀಚರ್​ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ತಬ್ಬಲಿ ಮೇಲೆ ಶೋಷಣೆ: ಬಿಹಾರ ಮೂಲಕದ 15 ವರ್ಷದ ಬಾಲಕಿ ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಳು. ಆಗ ಅನಾಥವಾದ ಇಬ್ಬರು ಮಕ್ಕಳಲ್ಲಿ ಅಕ್ಕನನ್ನು ಆಕೆಯ ಅಜ್ಜಿ ತನ್ನ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಬಾಲಕಿ ಸಾವನ್ನಪ್ಪಿದ ತಂದೆಯ ಅಣ್ಣನ ಮನೆಗೆ ಸೇರಿದ್ದಾರೆ. ನಾಲ್ಕು ವರ್ಷದ ಹಿಂದೆ ಸುರರಾಮ್​ನ ದೊಡ್ಡಪ್ಪನ ಮನೆಗೆ ಬಂದ ಬಾಲಕಿ ಇಲ್ಲೆ ಸ್ಥಳೀಯ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಾಳೆ. ದೊಡ್ಡಪ್ಪನ ಎರಡನೇ ಮಗ ಈಕೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ವರಸೆಯಲ್ಲಿ ಅಣ್ಣನಾಗುವ ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅನೇಕ ಬಾರಿ ಈಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ದುಂಡಿಗಲ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿ ಎಂದು ಸರ್ಕಲ್​ ಇನ್ಸ್​ಪೆಕ್ಟರ್​​ ರಮಣ ರೆಡ್ಡಿ ತಿಳಿಸಿದರು.

ಪ್ರಕರಣ ಬಯಲಾಗಿದ್ದು ಹೇಗೆ: ವಿದ್ಯಾರ್ಥಿ ಓದುತ್ತಿದ್ದ ಶಾಲೆಯಲ್ಲಿ ಬಾಲನಗರ ತಂಡ ಕಳೆದ ವಾರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಾದ ಮರುದಿನ ಶಿಕ್ಷಕಿಗೆ ವಿದ್ಯಾರ್ಥಿನಿ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಿಳಿಸಿದ್ದಾಳೆ. ಬಾಲನಗರ ತಂಡಕ್ಕೆ ಈ ವಿಚಾರವನ್ನು ತಿಳಿಸಿದ್ದಾರೆ. ಈ ತಂಡದ ಸದಸ್ಯರು ಈ ವಿಚಾರವನ್ನು ಮಕ್ಕಳ ರಕ್ಷಣಾ ಇಲಾಖೆಗೆ ತಿಳಿಸಿದ್ದಾರೆ. ಅಧಿಕಾರಿಗಳು ತಕ್ಷಣಕ್ಕೆ ಬಂದು ಸಂತ್ರಸ್ತೆಯನ್ನು ಈ ಕುರಿತು ವಿಚಾರಿಸಿದ್ದು, ಪ್ರಕರಣ ಸಂಬಂಧ ದುಂಡಿಗಲ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ಮತ್ತು ಐಪಿಸಿ ಸೆಕ್ಷನ್​ 376ರ ಅಡಿ ದೂರು ದಾಖಲಿಸಲಾಗಿದ್ದು, ಬಾಲಕಿಯನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಮಗುವಿಗೆ ಜನ್ಮ: ನವಜಾತ ಶಿಶು ಎಸೆದು, ಯುವತಿಗೆ ವಿಷವುಣಿಸಿದ ಪೋಷಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.