ಕೋಲಾರ: ಪೌರ ಕಾರ್ಮಿಕರಿಗೆ ಪುಡ್ ಕಿಟ್ ಕೊಡುವ ವಿಚಾರದಲ್ಲಿ ಗಲಾಟೆಯಾಗಿದ್ದು, ಆಯುಕ್ತರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಓದಿ: ಬೆಂಗಳೂರಲ್ಲಿ 4ನೇ ದಿನವೂ ಭಾರಿ ಮಳೆ: ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಮುಂಗಾರು ಆರಂಭ
ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಆಯುಕ್ತರಿಗೆ, ಉಪಾಧ್ಯಕ್ಷರ ಪತಿ ರಾಮಚಂದ್ರಪ್ಪ ಹಾಗೂ ಆತನ ಪುತ್ರ ಹಲ್ಲೆ ನಡೆಸಿದ್ದಾರೆ. ಪೌರ ಕಾರ್ಮಿಕರಿಗೆ ಫುಡ್ ಕಿಡ್ ಕೊಡುವಂತಹ ಕಾರ್ಯಕ್ರಮಕ್ಕೆ ನಗರಸಭೆ ಉಪಾಧ್ಯಕ್ಷರಾಗಿರುವ ಭಾಗ್ಯಮ್ಮ ಎಂಬುವರಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ, ಉಪಾಧ್ಯಕ್ಷೆ ಪತಿ ಹಾಗೂ ಆತನ ಪುತ್ರ ಹಲ್ಲೆ ಮಾಡಿದ್ದಾರೆ.
ಮುಳಬಾಗಿಲು ನಗರಸಭೆ ಆಯುಕ್ತ ಶ್ರೀನಿವಾಸಮೂರ್ತಿ ಮೇಲೆ ಹಲ್ಲೆ ಮಾಡಿದ್ದು, ಪುಡ್ ಕಿಟ್ ಕೊಡುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ವಿಚಾರಕ್ಕೆ ಜಗಳ ಶುರುವಾಗಿದೆ. ಇನ್ನು ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು - ಪ್ರತಿದೂರು ದಾಖಲಾಗಿದೆ.