ಕಡಬ (ದಕ್ಷಿಣ ಕನ್ನಡ): ಕೌಟುಂಬಿಕ ಕಲಹ ಹಿನ್ನೆಲೆ ಮನೆಬಿಟ್ಟು ಹೋದ ವ್ಯಕ್ತಿ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಾರಿ ಚಾಲಕ ದೇವರಾಜ ಸಾವನ್ನಪ್ಪಿರುವ ವ್ಯಕ್ತಿ.
ಕುಡಿತದ ದಾಸನಾಗಿದ್ದ ದೇವರಾಜ್ ಹೆಂಡತಿ ಜೊತೆ ಆಗ್ಗಿಂದಾಗ್ಗೆ ಜಗಳ ಆಡುತ್ತಿದ್ದರು. ಕಳೆದ ನ.28ರಂದು ಈತ ಹೆಂಡತಿ ಜೊತೆ ಜಗಳವಾಡಿದ್ದರು. ಅಪ್ಪ-ಅಮ್ಮನ ಜಗಳ ಕಂಡ ಮಗ ಈ ವಿಚಾರವನ್ನು ದೇವರಾಜ ತಮ್ಮ ತಂದೆ ನಾಗಪ್ಪ ಗೌಡ ಅವರಿಗೆ ತಿಳಿಸಿದ್ದರಂತೆ. ಆಗ ತಂದೆ ಮಗನಿಗೆ ಬುದ್ಧಿ ಹೇಳಿದ್ದರು. ಇದಾದ ಮರುದಿನ ನ.29 ರಂದು ದೇವರಾಜ ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಈ ವಿಚಾರವನ್ನು ಮಾವನಿಗೆ ತಿಳಿಸಿ, ಮನೆ ಮಂದಿಯೊಂದಿಗೆ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರು.
ಇದಾದ ಎರಡು ಮೂರು ದಿನಗಳ ಬಳಿಕ ದೇವರಾಜ ಮೃತದೇಹ ತಾಲೂಕಿನ ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಸಂಬಂಧ ದೇವರಾಜ ತಂದೆ ನಾಗಪ್ಪ ಗೌಡರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಗನ ಸಾವು ಅನುಮಾನಾಸ್ಪದವಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ಯುವಕರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ