ETV Bharat / crime

ಕೇರಳದ ಲವ್​​ಬರ್ಡ್ಸ್​ನಿಂದ ಬೆಂಗಳೂರಿನಲ್ಲಿ ಡ್ರಗ್ಸ್​ ಪೆಡ್ಲಿಂಗ್​​: ಇಲ್ಲಿದೆ ಪ್ರೇಮಿಗಳ ಖತರ್ನಾಕ್​ ಕತೆ

author img

By

Published : Mar 9, 2022, 3:42 PM IST

ಕೇರಳ ಮೂಲದ ಇಬ್ಬರನ್ನು ಮಾದಕ ವಸ್ತು ಮಾರಾಟ ಮಾರುತ್ತಿದ್ದ ಆರೋಪದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರಿರೂ ಪ್ರೇಮಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.

Kerala lovers drug peddling in Bengaluru
ಕೇರಳದ ಲವ್​​ಬರ್ಡ್ಸ್​ನಿಂದ ಬೆಂಗಳೂರಿನಲ್ಲಿ ಡ್ರಗ್ಸ್​ ಪೆಡ್ಲಿಂಗ್​​: ಇಲ್ಲಿದೆ ಪ್ರೇಮಿಗಳ ಕತೆ

ಬೆಂಗಳೂರು: ಇತ್ತೀಚೆಗೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಯುವತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದ ಹುಳಿಮಾವು ಪೊಲೀಸರಿಗೆ ವಿಚಾರಣೆ ವೇಳೆ‌ ಇಬ್ಬರೂ ಪ್ರೇಮಿಗಳು ಎಂಬ ವಿಚಾರ ಗೊತ್ತಾಗಿದೆ. ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯಾ ಎಂಬುವರನ್ನು ಬಂಧಿಸಿ ಸುಮಾರು 7 ಕೋಟಿ ಮೌಲ್ಯದ 13 ಕೆ.ಜಿ.ಹ್ಯಾಶ್ ಆಯಿಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳಿಬ್ಬರು ಕೇರಳ ಮೂಲದವರಾಗಿದ್ದಾರೆ. ವಿಷ್ಣುಪ್ರಿಯಾ ಬಾಲ್ಯದಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಅಂದಿನಿಂದ ತಂದೆ ತಮಿಳುನಾಡಿನ ಕೊಯಮತ್ತೂರಿಗೆ ಶಿಫ್ಟ್ ಆಗಿದ್ದರು. ಅಲ್ಲೇ ತನ್ನ ವಿದ್ಯಾಭ್ಯಾಸವನ್ನು ವಿಷ್ಣುಪ್ರಿಯಾ ಮುಂದುವರೆಸಿದ್ದು, ಕೊಯಮತ್ತೂರಿನ ಕಾಲೇಜಿನಲ್ಲಿ ಬಿಬಿಎ ಕೋರ್ಸ್​ಗೆ ಸೇರ್ಪಡೆಯಾಗಿದ್ದಳು.

ಮತ್ತೋರ್ವ ಆರೋಪಿ ಸಿಗಿಲ್ ವರ್ಗಿಸ್ ಕೂಡಾ ವಿಷ್ಣುಪ್ರಿಯಾ ಓದುತ್ತಿದ್ದ ಕಾಲೇಜಿನಲ್ಲಿಯೇ ಓದುತ್ತಿದ್ದನು. ಇಬ್ಬರು ಕೇರಳ ಮೂಲದವರೇ ಆಗಿದ್ದರಿಂದ ಆತ್ಮೀಯತೆ ಹೆಚ್ಚಾಗಿದೆ. ಅದೇ ಆತ್ಮೀಯತೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗುವಂತೆ ಮಾಡಿದೆ. ಕಾಲೇಜು ದಿನಗಳಿಂದಲೇ ಡ್ರಗ್ಸ್ ದಾಸರಾಗಿದ್ದ ಇಬ್ಬರು, ಹೆಚ್ಚು ಹಣ ಕೊಟ್ಟು‌ ಗಾಂಜಾ‌‌ ಸೇರಿದಂತೆ ಇತರೆ ಡ್ರಗ್ಸ್​ಅನ್ನು ತರಿಸಿಕೊಳ್ಳಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಅಕ್ಕ - ತಂಗಿ ಮದುವೆಯಾದ ಭೂಪ.. 2ನೇ ಹೆಂಡ್ತಿ ಪ್ರಿಯಕರನ ಕೊಲೆ ಮಾಡಿದ ಗಂಡ!

ವಿದ್ಯಾಭ್ಯಾಸ ಮುಗಿಸಿ ಕೆಲಸ ಮಾಡೋದನ್ನು ಬಿಟ್ಟು ಡ್ರಗ್ಸ್ ಪೆಡ್ಲಿಂಗ್ ಮಾಡೋದನ್ನೇ ಫುಲ್ ಟೈಂ ಜಾಬ್ ಮಾಡಿಕೊಂಡಿದ್ದರು. ಈ ಮೂಲಕ ಹಣ ಮಾಡುವ ಹುಚ್ಚಿಗೆ ಬಿದ್ದಿದ್ದಾರೆ. ಕೊಯಮತ್ತೂರಿಗಿಂತ ಬೆಂಗಳೂರಲ್ಲಿ ಡ್ರಗ್ಸ್​ಗೆ ಹೆಚ್ಚು ಬೇಡಿಕೆ ಇದೇ ಅಂತ ತಿಳಿದುಕೊಂಡಿದ್ದ ಈ ಜೋಡಿ, ಮೂರು ತಿಂಗಳ ಹಿಂದೆ ಕೊತ್ತನೂರಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಅಲ್ಲಿಗೆ ಸ್ನೇಹಿತರನ್ನೆಲ್ಲಾ ಸೇರಿಸಿ ಡ್ರಗ್ಸ್ ಕೊಟ್ಟು ಕಿಕ್ ಹತ್ತಿಸುತ್ತಿದ್ದರು ಎನ್ನಲಾಗ್ತಿದೆ.

ಕೇರಳದಿಂದ‌ ಬರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕಾಲೇಜಿನಲ್ಲಿ ಸೀಟ್ ಕೊಡಿಸ್ತಿದ್ದ ಸಿಗಿಲ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದ್ದ. ಅವರ ಮೂಲಕ ಇಡೀ ವಿದ್ಯಾರ್ಥಿ ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದ್ದನು. ಬಾಯ್ ಫ್ರೆಂಡ್​ನ ಈ ಕೃತ್ಯಕ್ಕೆ ಟ್ಯಾಟ್ಟೂ ಆರ್ಟಿಸ್ಟ್ ಆಗಿದ್ದ ಪ್ರಿಯತಮೆ ವಿಷ್ಣುಪ್ರಿಯಾ ಕೂಡ ಕೈ ಜೋಡಿಸಿದ್ದಳು. ವಿಶಾಖಪಟ್ಟಣದಿಂದ ಬಸ್ ಮೂಲಕವೇ ಒಂದು ಬಾರಿಗೆ ಎರಡ್ಮೂರು ಲೀಟರ್ ಹ್ಯಾಶಿಶ್ ಆಯಿಲ್ ತಂದು ಇಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು‌ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.