ETV Bharat / crime

ಇಂಟೀರಿಯರ್‌ ಡಿಸೈನರ್‌ನಿಂದ ಅತ್ಯಾಚಾರ ಯತ್ನ, ಜೀವ ಬೆದರಿಕೆ: ಪೊಲೀಸರಿಗೆ ದೂರು ನೀಡಿದ ನಟಿ - ಮುಂಬೈ

ಅಪಾರ್ಟ್‌ಮೆಂಟ್‌ನಲ್ಲಿ ಒಳಾಂಗಣ ವಿನ್ಯಾಸ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯ ವೇಳೆ ಇಂಟೀರಿಯರ್‌ ಡಿಸೈನರ್‌ವೋರ್ವ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ ಎಂದು ದೂರಿ ನಟಿಯೊಬ್ಬರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

Interior designer booked for 'molesting' actress in Mumbai
ಮುಂಬೈನಲ್ಲಿ ನಟಿಗೆ ಇಂಟಿರಿಯರ್‌ ಡಿಸೈನರ್‌ನಿಂದ ಬೆದರಿಕೆ ಆರೋಪ; ಕೇಸ್‌ ದಾಖಸಿದ ಪೊಲೀಸರಿಂದ ತನಿಖೆ
author img

By

Published : Aug 17, 2021, 11:48 AM IST

ಮುಂಬೈ(ಮಹಾರಾಷ್ಟ್ರ): ನಟಿಯೊಬ್ಬರಿಗೆ ಅತ್ಯಾಚಾರ ಯತ್ನ ಮತ್ತು ಜೀವ ಬೆದರಿಕೆ ಹಾಕಿದ ಗಂಭೀರ ಆರೋಪದಲ್ಲಿ ಇಂಟಿರಿಯರ್‌ ಡಿಸೈನರ್‌ವೋರ್ವನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಂಧೇರಿಯಲ್ಲಿರುವ ತನ್ನ ಹೊಸ ಅಪಾರ್ಟ್ಮೆಂಟ್‌ನಲ್ಲಿ ಡಿಸೈನರ್‌ಗೆ ನಟಿ ಕೆಲಸ ನೀಡಿದ್ದರು. ಆದರೆ ಆಕೆಯ ನಿರೀಕ್ಷೆಗೆ ತಕ್ಕಂತೆ ವಿನ್ಯಾಸದ ಕೆಲಸ ಮಾಡಿಕೊಟ್ಟಿಲ್ಲ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಇದು ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿತ್ತು.

ಈ ವೇಳೆ ಇಂಟೀರಿಯರ್‌ ಡಿಸೈನರ್ ಅಸಭ್ಯವಾಗಿ ವರ್ತಿಸಿ, ನಿಂದಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.