ETV Bharat / crime

ವಿಹಿಂಪ ಮುಖಂಡನ ವಿರುದ್ಧ ಜಾಲತಾಣದಲ್ಲಿ ಅಪಪ್ರಚಾರ.. ನಾಲ್ವರು ಆರೋಪಿಗಳ ಬಂಧನ

author img

By

Published : Jun 2, 2021, 9:24 PM IST

ವಿಹಿಂಪ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

vhp-leader-sharan-pump-well
ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಮುಖಂಡ ಶರಣ್ ಪಂಪ್​​ವೆಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶವನ್ನು ಫಾರ್ವರ್ಡ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ: ಬಜರಂಗದಳ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಅಪಪ್ರಚಾರ ; ದೂರು ದಾಖಲು

ಸುಳ್ಯ ತಾಲೂಕಿನ ಕಸಬಾದ ಭವಾನಿ ಶಂಕರ್ (32), ಮಂಗಳೂರಿನ ಬಜಾಲ್​ನ ನೌಶಾದ್ (27), ಕಾವೂರಿನ ಟಿಕ್ಕಿ ರವಿ (38) ಮತ್ತು ಮೂಡಬಿದ್ರೆಯ ಜಯಕುಮಾರ್ (33) ಬಂಧಿತ ಆರೋಪಿಗಳು.

ಇತ್ತೀಚೆಗೆ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್ ಅವರು ಹುಡುಗಿಯೊಂದಿಗೆ ವಾಟ್ಸಾಪ್ ಚಾಟ್ ಮಾಡಿದಂತೆ ಸಂದೇಶಗಳನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಲಾಗಿತ್ತು. ಯುವತಿಯನ್ನು ಲಾಡ್ಜ್ ಗೆ ಕರೆಯುವುದು ಸೇರಿದಂತೆ ಯುವತಿಯರನ್ನು ಇದೇ ರೀತಿ ಮಾಡಲಾಗಿದೆ ಎಂಬಂತೆ ಸಂದೇಶ ಸೃಷ್ಟಿಸಲಾಗಿತ್ತು.

ಈ ನಕಲಿ ಸಂದೇಶದ ವಿರುದ್ಧ ವಿಹಿಂಪ ಮುಖಂಡರು ದೂರು ನೀಡಿದ್ದಾರೆ. ಇದೀಗ ಈ ಸಂದೇಶವನ್ನು ಫಾರ್ವರ್ಡ್ ಮಾಡಿದ್ದ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.