ಮೈಸೂರು: ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಮೂವರು ಮಹಿಳೆಯರನ್ನ ರಕ್ಷಣೆ ಮಾಡಿ, ಇಬ್ಬರನ್ನು ಬಂಧಿಸಿರುವ ಘಟನೆ ಕಾಮನಕೇರಿ ಹುಂಡಿ ಗ್ರಾಮದಲ್ಲಿ ನಡೆದಿದೆ.
ಓದಿ: ಮಾಸ್ಕ್ ಧರಿಸು ಎಂದಿದ್ದಕ್ಕೆ ಮಾರ್ಷಲ್ಗೆ ಹೊಡೆದ ಮಹಿಳೆ: ವಿಡಿಯೋ ವೈರಲ್
ಗ್ರಾಮದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಎಸ್ಪಿ ಶಿವಕುಮಾರ್ ಮಾನವ ಕಳ್ಳಸಾಗಣೆ ನಿಷೇಧ ಘಟಕದ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ.
ಈ ವೇಳೆ ಉತ್ತರ ಭಾರತದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂರು ಜನ ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.