ಮುಂಬೈ: ಇಲ್ಲಿನ ದಹಿಸರ್ ಪ್ರದೇಶದಲ್ಲಿ ಪೊಲೀಸರು ರೆಸ್ಟೋರೆಂಟ್-ಕಮ್-ಬಾರ್ ಮೇಲೆ ದಾಳಿ ನಡೆಸಿದ್ದು, ವಿಶೇಷವಾಗಿ ನಿರ್ಮಿಸಿದ್ದ ಗೌಪ್ಯ ಸ್ಥಳದಿಂದ ಹಲವು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಶುಕ್ರವಾರ ನಡೆಸಿದ ದಾಳಿಯಲ್ಲಿ ಮ್ಯಾನೇಜರ್ ಸೇರಿದಂತೆ 19 ಗ್ರಾಹಕರು ಮತ್ತು ಆರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ದಾಳಿಯ ವೇಳೆ ಬಾರ್ನಲ್ಲಿ ಇತರರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ನಾವು ಡ್ಯಾನ್ಸ್ ಫ್ಲೋರ್‌ನಲ್ಲಿ ನಾಲ್ವರು ಮಹಿಳೆಯರನ್ನು ಗಮನಿಸಿದ್ದೇವೆ. ಆದರೆ ಉಳಿದ 17 ಮಹಿಳೆಯರು ವಿಶೇಷವಾಗಿ ನಿರ್ಮಿಸಿದ ಗೌಪ್ಯ ಸ್ಥಳದಲ್ಲಿದ್ದರು. ಈ ಮಹಿಳೆಯರು ಶೋಧ ಕಾರ್ಯಾಚರಣೆಯ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದರು. ಅವರನ್ನು ರಕ್ಷಿಸಲಾಗಿದೆ ಎಂದು ದಹಿಸರ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೊಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 ಅಡಿಯಲ್ಲಿ ಮತ್ತು ಅಶ್ಲೀಲತೆಗೆ ಸಂಬಂಧಿಸಿದ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಇದನ್ನೂ ಓದಿ: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ: 3 ಸಾವು, 13 ಜನರಿಗೆ ಗಾಯ