ETV Bharat / crime

ಕುಡಿದ ಮತ್ತಲ್ಲಿ ಕೈ ಕತ್ತರಿಸಿಕೊಂಡು ಹೈಡ್ರಾಮಾ..ನಡುರಸ್ತೆಯಲ್ಲಿ ಬಾಲಕಿಯ ಹುಚ್ಚಾಟ - ನೈನಿತಾಲ್‌ನ ತಾಲಿತಾಲ್ ಪ್ರದೇಶದ ಹೋಟೆಲ್‌

ನರ ಕತ್ತರಿಸಿಕೊಂಡು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಹುಡುಗಿಯನ್ನು ನೋಡಿದ ದಾರಿಹೋಕರು ಅವಳನ್ನು ಸ್ಥಳೀಯ ಬಿ.ಡಿ. ಪಾಂಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಅಜರ್, ಬಾಲಕಿಯ ಮಣಿಕಟ್ಟಿನ ಮೇಲೆ ಗಾಯವಾಗಿದೆ. ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

drunken girl
drunken girl
author img

By

Published : Aug 19, 2022, 11:45 AM IST

ನೈನಿತಾಲ್ (ಉತ್ತರಾಖಂಡ್): ಕುಡಿತ ಮತ್ತಿನಲ್ಲಿದ್ದ ಹುಡುಗಿಯೊಬ್ಬಳು ತನ್ನ ಕೈಗಳಲ್ಲಿನ ನರಗಳನ್ನು ಕೊಯ್ದುಕೊಂಡು ಹೈಡ್ರಾಮಾ ಮಾಡಿದ ಘಟನೆ ಇಲ್ಲಿ ನಡೆದಿದೆ. ಹುಡುಗಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ನೈನಿತಾಲ್‌ನ್​ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರು. ಇಬ್ಬರೂ ಲಖನೌ ಮೂಲದವರಾಗಿದ್ದು, ಹೋಟೆಲ್‌ನಲ್ಲಿ ತಂಗಿದ್ದರು.

ಈ ಸಂದರ್ಭದಲ್ಲಿ ತನ್ನ ಪ್ರಿಯಕರನೊಂದಿಗೆ ಫೋನ್‌ನಲ್ಲಿ ಜಗಳವಾಡಿದ ಯುವತಿ ಮದ್ಯ ಸೇವಿಸಿ ರಸ್ತೆ ಮಧ್ಯದಲ್ಲಿ ತೂರಾಡುತ್ತ ಗಲಾಟೆ ಮಾಡಿದ್ದಾರೆ. ಅಲ್ಲದೇ ತನ್ನ ಮಣಿಕಟ್ಟಿನ ನರಗಳನ್ನು ಕೂಡ ಕತ್ತರಿಸಿಕೊಂಡಿದ್ದಾರೆ. ನರ ಕತ್ತರಿಸಿಕೊಂಡು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಹುಡುಗಿಯನ್ನು ನೋಡಿದ ದಾರಿಹೋಕರು ಸ್ಥಳೀಯ ಬಿ.ಡಿ. ಪಾಂಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಅಜರ್, ಬಾಲಕಿಯ ಮಣಿಕಟ್ಟಿನ ಮೇಲೆ ಗಾಯವಾಗಿದೆ. ಆಕೆಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಬಾಲಕಿ ಲಖನೌ ನಿವಾಸಿಯಾಗಿದ್ದು, ಮೋಜಿನ ಪ್ರವಾಸಕ್ಕೆಂದು ನೈನಿತಾಲ್‌ಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನೈನಿತಾಲ್‌ನ ತಾಲಿತಾಲ್ ಪ್ರದೇಶದ ಹೋಟೆಲ್‌ನಲ್ಲಿ ತನ್ನ ಸ್ನೇಹಿತೆಯೊಂದಿಗೆ ತಂಗಿದ್ದರು. ಗುರುವಾರ ಸಂಜೆ ಹೋಟೆಲ್‌ನಲ್ಲಿ ಕುಳಿತು ತನ್ನ ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಬಳಿಕ ದೂರವಾಣಿ ಸಂಭಾಷಣೆ ಮಾತಿನ ಚಕಮಕಿಗೆ ತಿರುಗಿತ್ತು. ಇದಾದ ಬಳಿಕ ಬಾಲಕಿ ಮದ್ಯ ಸೇವಿಸಿ, ಮಣಿಕಟ್ಟು ಕತ್ತರಿಸಿಕೊಂಡಿದ್ದಾಳೆ. ನಂತರ ಹೊಟೇಲ್​ನಿಂದ ಹೊರಬಂದು ನಡುರಸ್ತೆಯಲ್ಲಿ ಗಲಾಟೆ ಮಾಡಿದ್ದಾಳೆ. ಬಾಲಕಿಯ ಪೂರ್ವಾಪರಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಮಗಳೊಂದಿಗೆ ಶಿವನ ದರ್ಶನ ಪಡೆದ ತಾಯಿ... ದೇವಾಲಯದ ಮಹಡಿಯಿಂದ ಕೆಳಗೆ ಹಾರಿದ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.