ETV Bharat / crime

ಪಾರ್ನ್​ ವಿಡಿಯೋ ಚಿತ್ರೀಕರಣ, ಅಪ್​ಲೋಡ್​ ಆರೋಪ: ನಟಿ ಗೆಹನಾ ವಸಿಷ್ಠ ಅರೆಸ್ಟ್​ - Actor Gehana Vasisth arrested for alleged role in shooting, uploading porn videos

ಅಶ್ಲೀಲ ವಿಡಿಯೋ ವ್ಯವಹಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಕಿರುತರೆ ನಟಿ ಹಾಗೂ ರೂಪದರ್ಶಿ ಗೆಹನಾ ವಸಿಷ್ಠ ಸೇರಿದಂತೆ ಐವರನ್ನು ಮುಂಬೈ ಅಪರಾಧ ವಿಭಾಗ ಬಂಧಿಸಿದೆ.

Gehana Vasisth
ಗೆಹನಾ ವಸಿಷ್ಠ
author img

By

Published : Feb 7, 2021, 11:13 AM IST

ಮುಂಬೈ: ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಅದನ್ನ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿದ ಆರೋಪದಡಿ ಕಿರುತರೆ ನಟಿ ಹಾಗೂ ರೂಪದರ್ಶಿ ಗೆಹನಾ ವಸಿಷ್ಠರನ್ನ ಮುಂಬೈ ಅಪರಾಧ ವಿಭಾಗ ಬಂಧಿಸಿದೆ.

ಗೆಹನಾ ವಸಿಷ್ಠರನ್ನ ಇಂದು ಮುಂಬೈನ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಪ್ರಕರಣ ಸಂಬಂಧ ನಟಿಯೊಂದಿಗೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅಶ್ಲೀಲ ವಿಡಿಯೋ ವ್ಯವಹಾರದಲ್ಲಿ ತೊಡಗಿದ್ದ ಈ ಗ್ಯಾಂಗ್​ನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿರುವ ರೋಯಾ ಖಾನ್ ಅಲಿಯಾಸ್ ಯಾಸ್ಮೀನ್​​ ಕೂಡ ಪೊಲೀಸರ ಅತಿಥಿಯಾಗಿದ್ದಾನೆ. ಈಕೆ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​​ ಕ್ಯಾರವಾನ್​ಗೆ ಲಾರಿ ಡಿಕ್ಕಿ..!

ಬಾಲಿವುಡ್‌ನಲ್ಲಿ ಕೆಲಸ ಮಾಡಲು ಬಯಸಿದ್ದ ಕೆಲ ಹೆಣ್ಣುಮಕ್ಕಳ ಲಿಸ್ಟ್​ ಅನ್ನು ರೋಯಾ ಖಾನ್​ರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ, ಒಪ್ಪಂದ ಮಾಡಿಕೊಂಡು ಬಳಿಕ ಅವರನ್ನು ಅಶ್ಲೀಲ ವಿಡಿಯೋ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಹೇಳುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆಯರು ದೂರು ನೀಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.