ಶಿವಮೊಗ್ಗ: ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ ಹುಂಚ ಸಮೀಪದ ಆದಿಗದ್ದೆ ಗ್ರಾಮದಲ್ಲಿ ನಡೆದಿದೆ.
ಹೊಸನಗರ ತಾಲೂಕು ಆದಿಗದ್ದೆಯ ಉಮೇಶ್(47) ಮೃತ ರೈತ. ಉಮೇಶ್ ತನ್ನ ಹೆಂಡತಿ, ಮಗ ಹಾಗೂ ಕೂಲಿಕಾರರ ಜೊತೆ ಅಡಿಕೆ ತೋಟದ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಸಿಡಿಲು ಬಡಿದಿದೆ. ಸಿಡಿಲನ ಬಡಿತಕ್ಕೆ ಉಮೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಮೇಶ್ ಜತೆ ಬರುತ್ತಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.