ETV Bharat / city

ವಿದ್ಯಾರ್ಥಿಗಳಿಗೆ ದೃಷ್ಟಿ ದೋಷ ಸಮಸ್ಯೆ: ಕನ್ನಡಕ ವಿತರಣೆಗೆ ಮುಂದಾದ ಶ್ರೀ ಜಪಾನಂದ ಸ್ವಾಮೀಜಿ - Shri Japananda Swamiji distribute spectacles for students

ಆನ್​ಲೈನ್ ತರಗತಿಗಳು ಆರಂಭವಾದ ನಂತರ ಪಾವಗಡ ತಾಲೂಕಿನಲ್ಲಿ ದೃಷ್ಟಿ ದೋಷದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಶಾಲಾಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ಕೆ ಪಾವಗಡದ ಶ್ರೀ ಜಪಾನಂದ ಸ್ವಾಮೀಜಿ ಮುಂದಾಗಿದ್ದಾರೆ.

ದೃಷ್ಟಿ ದೋಷದ ಸಮಸ್ಯೆ ಕುರಿತು ಮಾಹಿತಿ ನೀಡಿದ ಶ್ರೀ ಜಪಾನಂದ ಸ್ವಾಮೀಜಿ

author img

By

Published : Apr 1, 2021, 9:32 AM IST

ತುಮಕೂರು: ದೃಷ್ಟಿ ದೋಷದ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮುಖ್ಯವಾಗಿ ಗ್ರಾಮೀಣ ಭಾಗದ ಶಾಲಾ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆರಂಭವಾಗಿರುವ ಆನ್​ಲೈನ್​ ತರಗತಿಗಳು ಎನ್ನಲಾಗುತ್ತಿದೆ.

ದೃಷ್ಟಿ ದೋಷದ ಸಮಸ್ಯೆ ಕುರಿತು ಮಾಹಿತಿ ನೀಡಿದ ಶ್ರೀ ಜಪಾನಂದ ಸ್ವಾಮೀಜಿ

ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಪಾವಗಡದ ಶ್ರೀ ಜಪಾನಂದ ಸ್ವಾಮೀಜಿ ಅವರು, ಶಾಲಾಮಕ್ಕಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಾಗಾಗಿ ಈಗಾಗಲೇ ಆನ್​ಲೈನ್ ತರಗತಿಗಳನ್ನು ಎದುರಿಸುತ್ತಿರುವ ಹಾಗೂ ದೃಷ್ಟಿ ದೋಷದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಲಾಗುತ್ತಿದೆ.

ಕೋವಿಡ್ ಸೋಂಕು ಹರಡುವಿಕೆ ಆರಂಭಕ್ಕೂ ಮುನ್ನ ಪಾವಗಡ ತಾಲೂಕಿನ ವ್ಯಾಪ್ತಿಯಲ್ಲಿ ದೃಷ್ಟಿ ದೋಷದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಕನ್ನಡಕಗಳನ್ನು ವಿತರಿಸಲಾಗುತ್ತಿತ್ತು. ಇದೀಗ ಆನ್​ಲೈನ್ ತರಗತಿಗಳು ಆರಂಭವಾದ ನಂತರ ಪಾವಗಡ ತಾಲೂಕಿನಲ್ಲಿ ದೃಷ್ಟಿ ದೋಷದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಪಾವಗಡ ತಾಲೂಕು ವ್ಯಾಪ್ತಿಯಲ್ಲಿ 3000 ಮಕ್ಕಳಿಗೆ ಕನ್ನಡಕಗಳನ್ನು ವಿತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.