ETV Bharat / city

ಶಿರಾ ಉಪಕದನ: ಗೆಲುವಿನ ವಿಭಿನ್ನ ಲೆಕ್ಕಾಚಾರದಲ್ಲಿವೆ ಮೂರು ಪಕ್ಷಗಳು..! - ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ, ಶಿರಾ ಉಪಚುನಾವಣೆ

ಶಿರಾ ಉಪಕದನದಲ್ಲಿ ಕುಂಚಿಟಿಗ, ಭೋವಿ, ಲಿಂಗಾಯತರು, ಲಂಬಾಣಿ, ಗೊಲ್ಲ, ಮುಸ್ಲಿಂ, ನಾಯಕ, ಕುರುಬ ಸಮುದಾಯ ಸೇರಿದಂತೆ ಅನೇಕ ಸಣ್ಣಪುಟ್ಟ ಸಮುದಾಯಗಳ ಮತ ಗಳಿಕೆ ಪ್ರಮಾಣದಲ್ಲಿ ಲೆಕ್ಕಾಚಾರಗಳು ನಡೆದಿವೆ. ಈ ಮೂಲಕ ತಮ್ಮದೇ ಗೆಲುವು ಎಂಬ ಭಾವನೆ ಹೊಂದಿದ್ದಾರೆ. ಈ ರೀತಿಯ ಗೆಲುವಿನ ಲೆಕ್ಕಾಚಾರಗಳ ಮೇಲೆ ಅಲ್ಲಲ್ಲಿ ಬೆಟ್ಟಿಂಗ್ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

shira-by-election
ಶಿರಾ ಉಪಕದನ
author img

By

Published : Nov 7, 2020, 4:49 PM IST

ತುಮಕೂರು: ಭಾರಿ ಕುತೂಹಲ ಕೆರಳಿಸಿರುವ ಶಿರಾ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಕುರಿತು ಕ್ಷೇತ್ರದಲ್ಲಿ ಸಾಕಷ್ಟು ವಿಭಿನ್ನ ರೀತಿಯ ಲೆಕ್ಕಾಚಾರಗಳು ನಡೆಯುತ್ತಿವೆ. ಹಲವು ಪಕ್ಷದವರು ಬೂತ್ ಮಟ್ಟದಲ್ಲಿ ಮತಗಳಿಕೆಯ ಲೆಕ್ಕಾಚಾರದಲ್ಲಿ ತೊಡಗುವ ಮೂಲಕ ಗೆಲುವು ತಮ್ಮದೇ ಎಂಬ ನಂಬಿಕೆ ಹೊಂದಿದ್ದಾರೆ.

ಶಿರಾ ಉಪಕದನ

ಇನ್ನೊಂದೆಡೆ ಈ ಬಾರಿ ಜಾತಿ ಲೆಕ್ಕಾಚಾರ ಕೂಡ ಭರ್ಜರಿಯಾಗಿ ನಡೆಯುತ್ತಿರುವುದು ಇಲ್ಲಿ ಗಮನಾರ್ಹ. ಅದರಲ್ಲಿ ಕುಂಚಿಟಿಗ, ಭೋವಿ, ಲಿಂಗಾಯತರು, ಲಂಬಾಣಿ, ಗೊಲ್ಲ, ಮುಸ್ಲಿಂ, ನಾಯಕ, ಕುರುಬ ಸಮುದಾಯ ಸೇರಿದಂತೆ ಅನೇಕ ಸಣ್ಣಪುಟ್ಟ ಸಮುದಾಯಗಳ ಮತ ಗಳಿಕೆ ಪ್ರಮಾಣದಲ್ಲಿ ಲೆಕ್ಕಾಚಾರಗಳು ನಡೆದಿವೆ. ಈ ಮೂಲಕ ತಮ್ಮದೇ ಗೆಲುವು ಎಂಬ ಭಾವನೆಯನ್ನ ಮೂರು ಪಕ್ಷಗಳು ಹೊಂದಿವೆ. ಈ ರೀತಿಯ ಗೆಲುವಿನ ಲೆಕ್ಕಾಚಾರಗಳ ಮೇಲೆ ಅಲ್ಲಲ್ಲಿ ಬೆಟ್ಟಿಂಗ್ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ.

shira-by-election
ಶಿರಾ ಉಪಕದನ

ಅದರಲ್ಲೂ ಇದೇ ಮೊದಲ ಬಾರಿಗೆ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ಧಾವಂತದಲ್ಲಿರುವ ಬಿಜೆಪಿ ಕೂಡ ಸಾಕಷ್ಟು ವಿಶ್ವಾಸ ಇರಿಸಿಕೊಂಡಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ, ಶಿರಾ ಉಪಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಕನಿಷ್ಠ 25 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸುತ್ತೇವೆ ಎಂದಿದ್ದಾರೆ. ಪ್ರತಿ ಜಿಪಂ ಕ್ಷೇತ್ರದಲ್ಲಿ 4 ರಿಂದ 5 ಸಾವಿರ ಮತಗಳಲ್ಲಿ ಲೀಡ್ ಇರುತ್ತೇವೆ. ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಜಿಲ್ಲೆಯ ಕೆಲ ಜೆಡಿಎಸ್ ನಾಯಕರು ಕಾಂಗ್ರೆಸ್​​ಗೆ ಹೋಗಲು ತಯಾರಾಗಿದ್ದರು. ಅವರೆಲ್ಲಾ‌ ಬಿಜೆಪಿ ಕಡೆ ವಾಲಲಿದ್ದಾರೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.