ETV Bharat / city

'ಸಂಕ್ರಾಂತಿ' ಆಚರಣೆಗೆ ಕಲ್ಪತರು ನಾಡಿನಲ್ಲಿ ಭರದ ಸಿದ್ದತೆ

ಸಂಕ್ರಾಂತಿ ಹಬ್ಬಕ್ಕೆ ತುಮಕೂರು ನಗರದಾದ್ಯಂತ ಖರೀದಿಯ ಭರಾಟೆ ಜೋರಾಗಿದೆ. ಎಲ್ಲೆಲ್ಲೂ ಕಬ್ಬಿನ ರಾಶಿ, ರೆಡಿಮೇಡ್‌ ಎಳ್ಳು-ಬೆಲ್ಲಗಳ ಮಿಶ್ರಣ, ಸಕ್ಕರೆ ಅಚ್ಚುಗಳು ಕೊಳ್ಳುಗರನ್ನು ಸೆಳೆಯುತ್ತಿವೆ.

preparing-for-the-sankranti-celebration-in-tumkur
'ಸಂಕ್ರಾಂತಿ' ಆಚರಣೆಗೆ ಕಲ್ಪತರು ನಾಡಿನಲ್ಲಿ ಭರದ ಸಿದ್ದತೆ
author img

By

Published : Jan 13, 2021, 12:38 PM IST

ತುಮಕೂರು: ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ರಾಜ್ಯದ ಎಲ್ಲೆಡೆ ಸಡಗರ-ಸಂಭ್ರಮದ ಸಿದ್ದತೆ ಆರಂಭವಾಗಿದೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

'ಸಂಕ್ರಾಂತಿ' ಆಚರಣೆಗೆ ಕಲ್ಪತರು ನಾಡಿನಲ್ಲಿ ಭರದ ಸಿದ್ದತೆ

ಹಬ್ಬದ ಪ್ರಯುಕ್ತ ನಗರದ ಅಂತರಸನಹಳ್ಳಿ ಹೂವು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು, ಹೂವು-ಹಣ್ಣು, ಕಬ್ಬು, ಪೂಜಾ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಸಂಕ್ರಾಂತಿ ಹಬ್ಬಕ್ಕೆಂದು ಹೊರಜಿಲ್ಲೆಗಳಿಂದ ಕಬ್ಬು ಬಂದಿದ್ದು, ಒಂದು ಜೊತೆ ಕಬ್ಬನ್ನು 40 ರಿಂದ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ ಕೆಜಿಗೆ 90 ರಿಂದ 100 ರೂ. ಹಾಗೂ ಅವರೆಕಾಯಿ 60 ರಿಂದ 70 ರೂಪಾಯಿಯಂತೆ ಮಾರಾಟವಾಗುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿರುವ ಸಿದ್ದಪಡಿಸಿದ ಎಳ್ಳು-ಬೆಲ್ಲ ಸಣ್ಣ ಪ್ಯಾಕೆಟ್ 30 ರೂಪಾಯಿಯಾಗಿದೆ.

ಇನ್ನು, ಹೂವಿನ ಬೆಲೆಯಲ್ಲಿಯೂ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಸೇವಂತಿಗೆ ಮಾರಿಗೆ 100, ಚೆಂಡು ಹೂವು ಮಾರಿಗೆ 60, ಬಿಡಿ ಹೂವು ಕೆಜಿಗೆ 40, ಕನಕಾಂಬರ 100 ಗ್ರಾಂಗೆ 100ರೂ ಆಗಿದೆ. ಬಾಳೆಹಣ್ಣು ಒಂದು ಕೆಜಿಗೆ 50 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.