ತುಮಕೂರು: ಜಿಲ್ಲೆಯ ಶಿರಾ ನಗರದ ಹಿಂದೂ ಮಹಾಗಣಪತಿ ನಿಮಜ್ಜನ ವೇಳೆಯಲ್ಲಿ ಡಿಜೆ ಸಾಂಗ್ಗೆ ಶಿರಾ ಶಾಸಕ ಡಾ. ರಾಜೇಶ್ ಗೌಡ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್, ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ ಗಣೇಶಮೂರ್ತಿಯನ್ನು ನಿಮಜ್ಜನ ಮಾಡಲಾಯಿತು. ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಶಾಸಕ ರಾಜೇಶ್ ಗೌಡ ಪಾಲ್ಗೊಂಡು ಭಗವಾಧ್ವಜವನ್ನು ನಗರದ ಪ್ರಮುಖ ವೃತ್ತಗಳಲ್ಲಿ ಹಿಡಿದು, ಸಂಘಟಕರೊಂದಿಗೆ ನೃತ್ಯ ಮಾಡಿದರು.
ಶಾಸಕರೊಂದಿಗೆ ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಕೂಡ ಡ್ಯಾನ್ಸ್ ಮಾಡಿದರು.
ಇದನ್ನೂ ಓದಿ: 1,100 GK ಪ್ರಶ್ನೆಗಳಿಗೆ ಪಟಾ ಪಟ್ ಉತ್ತರ: ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ನಲ್ಲಿ ಧಾರವಾಡ ಬಾಲಕ