ETV Bharat / city

ಆಹಾರ ಅರಸಿ ಬಂದು ಪಾಳು ಬಾವಿಗೆ ಬಿತ್ತು ಚಿರತೆ; ನೋಡಲು ಮುಗಿಬಿದ್ದ ಜನಸಾಗರ - ಚಿರತೆಯ ರಕ್ಷಣೆ

ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಪಾಳುಬಾವಿಗೆ ಬಿದ್ದಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಬಾವಿಯಲ್ಲಿರುವ ಚಿರತೆಯ ರಕ್ಷಣೆಗೆ ಹಾಸನದಿಂದ ಅರಿವಳಿಕೆ ತಜ್ಞರ ತಂಡ ಬರುವಿಕೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ.

ಆಹಾರ ಅರಸಿ ಬಂದು ಪಾಳು ಬಾವಿಗೆ ಬಿದ್ದ ಚಿರತೆ
author img

By

Published : Aug 4, 2019, 4:40 PM IST

ತುಮಕೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಸುಮಾರು 40 ಅಡಿ ಆಳದ ಬಾವಿಗೆ ಬಿದ್ದಿರುವ ಘಟನೆ ಗುಬ್ಬಿ ತಾಲೂಕಿನ ಜೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಣ್ಣ ಎಂಬವರಿಗೆ ಸೇರಿದ ತೋಟದಲ್ಲಿ ಪಾಳುಬಿದ್ದ ಬಾವಿಯಲ್ಲಿ ಚಿರತೆ ಇರುವುದು ಗಮನಕ್ಕೆ ಬಂದಿದೆ. ನಿನ್ನೆ ರಾತ್ರಿಯೇ ಚಿರತೆ ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಅಂದಾಜು ಎರಡು ವರ್ಷ ವಯಸ್ಸಿನ ಚಿರತೆ ಬಾವಿಗೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.

ಆಹಾರ ಅರಸಿ ಬಂದು ಪಾಳು ಬಾವಿಗೆ ಬಿದ್ದ ಚಿರತೆ

ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಿಂದ ಚಿರತೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುರುಚಲು ಗಿಡಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಚಿರತೆಗಳು ವಾಸಿಸುತ್ತವೆ. ಹೀಗಾಗಿ ಈ ಪ್ರದೇಶದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗ್ರಾಮಗಳಿಗೆ ನುಗ್ಗುವ ಚಿರತೆಗಳು ಬೀದಿನಾಯಿ, ಕುರಿ, ಮೇಕೆಗಳನ್ನು ತಿಂದು ಹಾಕುತ್ತವೆ. ಅದೇ ರೀತಿ ಆಹಾರ ಅರಸಿ ನಿನ್ನೆ ರಾತ್ರಿ ಚಿರತೆ ಗ್ರಾಮಕ್ಕೆ ಹೋಗಿರಬಹುದೆಂದು ಇಲಾಖೆ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

ಶಿವಣ್ಣವರ ತೋಟದಲ್ಲಿರುವ ಪಾಳುಬಿದ್ದ ಬಾವಿಯಲ್ಲಿರುವ ಚಿರತೆಯ ರಕ್ಷಣೆಗೆ ಹಾಸನದಿಂದ ಅರಿವಳಿಕೆ ತಜ್ಞರಾದ ಮುರಳಿ ಮತ್ತು ಅವರ ತಂಡ ಬರುವಿಕೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ಇನ್ನೊಂದೆಡೆ ಚಿರತೆಯನ್ನು ನೋಡಲು ಸುತ್ತಮುತ್ತಲ ಜನರು ತಂಡೋಪತಂಡವಾಗಿ ಬರುತ್ತಿರುವುದು ಸಾಮಾನ್ಯವಾಗಿದೆ.

Intro:ಹಾಳು ಬಾವಿಗೆ ಬಿದ್ದ ಚಿರತೆ.....

ತುಮಕೂರು
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ ಸುಮಾರು 40 ಅಡಿ ಆಳದ ಬಾವಿಗೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜೆ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಣ್ಣ ಎಂಬುವರಿಗೆ ಸೇರಿದ ತೋಟದಲ್ಲಿ ಪಾಳುಬಿದ್ದ ಬಾವಿಯಲ್ಲಿ ಚಿರತೆ ಇರುವುದು ಗಮನಕ್ಕೆ ಬಂದಿದೆ. ನಿನ್ನೆ ರಾತ್ರಿಯೇ ಚಿರತೆ ಬಾವಿಗೆ ಬಿದ್ದ ರಬಹುದೆಂದು ಅಂದಾಜಿಸಲಾಗಿದೆ.
ಸುಮಾರು ಎರಡು ವರ್ಷ ವಯಸ್ಸಿನ ಚಿರತೆ ಬಾವಿಗೆ ಬಿದ್ದಿದ್ದರು ಸಣ್ಣಪುಟ್ಟ ಗಾಯಗಳೊಂದಿಗೆ ಆರೋಗ್ಯವಾಗಿದೆ. ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಿಂದ ಚಿರತೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಕುರುಚಲು ಗಿಡಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಸಾಮಾನ್ಯವಾಗಿ ಚಿರತೆಗಳು ವಾಸಿಸುತ್ತಿವೆ. ಹೀಗಾಗಿ ಈ ಪ್ರದೇಶದಲ್ಲಿ ಚಿರತೆಗಳ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಗ್ರಾಮಗಳಿಗೆ ನುಗ್ಗಿ ಬೀದಿನಾಯಿಗಳು ಕುರಿ ಮೇಕೆಗಳನ್ನು ತಿಂದು ಹಾಕುತ್ತವೆ.

ಅದೇ ರೀತಿ ಆಹಾರ ಅರಸಿ ನಿನ್ನೆ ರಾತ್ರಿ ಚಿರತೆ ಗ್ರಾಮಕ್ಕೆ ಹೋಗಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಶಿವಣ್ಣವರ ತೋಟದಲ್ಲಿರುವ ಪಾಳುಬಿದ್ದ ಬಾವಿಯಲ್ಲಿರುವ ಚಿರತೆಯ ರಕ್ಷಣೆಗೆ ಹಾಸನದಿಂದ ಅರವಳಿಕೆ ತಜ್ಞರಾದ ಮುರಳಿ ಮತ್ತು ಅವರ ತಂಡ ಬರುವಿಕೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ಇನ್ನೊಂದೆಡೆ ಚಿರತೆಯನ್ನು ನೋಡಲು ಸುತ್ತಮುತ್ತಲ ಜನರು ತಂಡೋಪತಂಡವಾಗಿ ಬರುತ್ತಿರುವುದು ಸಾಮಾನ್ಯವಾಗಿದೆ.Body:TumakuruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.