ETV Bharat / city

ಶಿರಾ ಉಪ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿರುಸಿನ ಪ್ರಚಾರ - ತುಮಕೂರು ಲೇಟೆಸ್ಟ್​ ನ್ಯೂಸ್​

ಶಿರಾ ವಿಧಾನಸಭಾ ಕ್ಷೇತ್ರದ ದೋಣಿಹಳ್ಳಿ, ಹಂದಿಕುಂಟೆ, ಅಗ್ರಹಾರ, ಕರೇಕ್ಯಾತನಹಳ್ಳಿ, ರಾಗನಹಳ್ಳಿ , ಹುಳಿಗೆರೆ, ಮದಲೂರು, ಲಿಂಗದಹಳ್ಳಿ ಸೇರಿದಂತೆ ಒಟ್ಟು 17 ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತಯಾಚನೆ ಮಾಡಿದರು.

kpcc-president-dk-shivakumar-election-campaign
ಶಿರಾ ಉಪಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿರುಸಿನ ಪ್ರಚಾರ
author img

By

Published : Oct 28, 2020, 7:43 PM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬಿರುಸಿನ ಮತ ಪ್ರಚಾರದಲ್ಲಿ ನಡೆಸಿದರು.

ಶಿರಾ ಉಪಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿರುಸಿನ ಪ್ರಚಾರ

ಶಿರಾ ವಿಧಾನಸಭಾ ಕ್ಷೇತ್ರದ ದೋಣಿಹಳ್ಳಿ, ಹಂದಿಕುಂಟೆ, ಅಗ್ರಹಾರ, ಕರೇಕ್ಯಾತನಹಳ್ಳಿ, ರಾಗನಹಳ್ಳಿ, ಹುಳಿಗೆರೆ, ಮದಲೂರು, ಲಿಂಗದಹಳ್ಳಿ ಸೇರಿದಂತೆ ಒಟ್ಟು 17 ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಮತಯಾಚನೆ ಮಾಡಿದರು. ಇದೇ ವೇಳೆ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದವರು ಹತಾಶರಾಗಿ ಬೆಳ್ಳಂ ಬೆಳಗ್ಗೆ ಹಣಕೊಟ್ಟು ಜನರನ್ನು ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಹಣದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಅಪಾರ ನಂಬಿಕೆ ಹೊಂದಿದ್ದಾರೆ. ಇದಕ್ಕೆ ಚುನಾವಣಾ ಆಯೋಗ, ಪೊಲೀಸರು ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆರ್​.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಳ್ಳಲಿದ್ದಾರೆ ಎಂಬ ಹತಾಶ ಭಾವನೆಯಿಂದ ಕಾಂಗ್ರೆಸ್ ಪ್ರಚಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರ ಹೆಸರುಗಳನ್ನು ವರ್ಗಾವಣೆ ಮಾಡೋದಲ್ಲ, ಬದಲಾಗಿ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ನಾವು ಅಧಿಕಾರಕ್ಕೆ ಬಂದ ನಂತರ ಅವರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಗುಡುಗಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಶಿರಾದಲ್ಲಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಉದ್ಘಾಟಿಸಿದ್ದು, ನಲಪಾಡ್, ಸಂತೋಷ್ ಜಯಚಂದ್ರ , ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಂತೋಷ್ ಜಯಚಂದ್ರ, ಮಂಗಳೂರು - ಮೈಸೂರಿನಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಣ, ಹೆಂಡ ಹಂಚಲು ಬಂದಿರುವ ಬಿಜೆಪಿ ಮುಖಂಡರಿಗೆ ನಾಚಿಕೆಯಾಗಬೇಕು. ಶಿರಾ ಕ್ಷೇತ್ರದಲ್ಲಿ ಈ ರೀತಿ ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿಯ ಅರ್ಥಮಾಡಿಕೊಳ್ಳಬೇಕು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಜಯಚಂದ್ರ ಅವರ ಕೊಡುಗೆ ಅಪಾರವಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.