ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಣ್ಣ ಸೇರಿದಂತೆ ಯಾರೇ ಬೆಂಬಲಿಸದಿದ್ದರೂ ಮತದಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಶಿರಾ ಶಾಸಕ ಸತ್ಯನಾರಾಯಣ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೀಡರ್ಗಳ ಜೊತೆ ಜೈಕಾರ ಹಾಕೋರು, ಬಹುಪರಾಕ್ ಹೇಳೋರು, ಹೊಡೆದಾಡೋರು, ತಲೆ ಒಡೆಯೋರು ನಿಜವಾದ ಮತದಾರರಲ್ಲ. ಮನೆಯಲ್ಲಿ ಕುಂತವರೇ ನಿಜವಾದ ಮತದಾರರು. ಕಾಂಗ್ರೆಸ್ನಲ್ಲಿ ನೆಹರು ಸಹ ಕುಟಂಬ ರಾಜಕಾರಣ ಮಾಡಿಲ್ಲವೆ. ರಾಜೀವ್, ಇಂದಿರಾ, ಸೋನಿಯಾ, ಈಗ ಅಣ್ಣ ತಂಗಿ ಬಂದಿಲ್ಲವೆ. ದೇವೇಗೌಡರು ಕುಟುಂಬ ರಾಜಕಾರಣ ಮಾಡೋದ್ರಲ್ಲಿ ತಪ್ಪೇನಿದೆ ಎಂದರು.