ತುಮಕೂರು: ಮೇಯುತ್ತಿದ್ದಾಗ 25 ಅಡಿ ಆಳದ ಬಾವಿಗೆ ಉರುಳಿಬಿದ್ದು ಒದ್ದಾಡುತ್ತಿದ್ದ ಹಸುವನ್ನು, ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿ ಪಾರು ಮಾಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕು ಅರೆಕ್ಯಾತನಹಳ್ಳಿಯಲ್ಲಿ ನಡೆದಿದೆ.
ಓದಿ: ಇನ್ಮುಂದೆ ಗಂಜಿ ಕೇಂದ್ರಗಳಲ್ಲಿ ಸಿಗಲಿದೆ ಫುಲ್ ಮೀಲ್ಸ್ : ಸಚಿವ ಆರ್.ಅಶೋಕ್
ರೈತರೊಬ್ಬರು ಹಸು ಮೇಯಿಸಲು ತೋಟಕ್ಕೆ ಕರೆದುಕೊಂಡು ಬಂದ ವೇಳೆ ಆಯತಪ್ಪಿ ಪಾಳು ಬಿದ್ದ ಬಾವಿಯಲ್ಲಿ ಬಿದ್ದಿದೆ. ನಂತರ ಎದ್ದು ಹೊರಬರಲಾಗದೆ ತೀವ್ರ ನರಳಾಡುತ್ತಿತ್ತು. ಹಸುವಿನ ಮಾಲೀಕನಿಗೂ ದಿಕ್ಕೆ ತೋಚದಂತಾಗಿತ್ತು.
ವಿಷಯ ತಿಳಿದು ಬಂದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸದಸ್ಯರು ಹಸುವನ್ನು ಬಾವಿಯಿಂದ ಮೇಲೆತ್ತಲು ಯೋಜನೆ ರೂಪಿಸಿದರು. ನಂತರ ಬೃಹತ್ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಅದರ ಸಹಾಯದಿಂದ ಹಸುವಿನ ಜೀವ ರಕ್ಷಿಸಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ಹಸುವಿನ ಕಾಲು ಮುರಿದುಹೋಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.