ETV Bharat / city

ಹಂದಿ ಅಣ್ಣಿ ಕೊಲೆ ಕೇಸ್‌: ಎನ್​ಕೌಂಟರ್​ ಭೀತಿಯಲ್ಲಿ ಎಸ್ಪಿ ಮುಂದೆ ಶರಣಾದ ಆರೋಪಿಗಳು - ಚಿಕ್ಕಮಗಳೂರು ಪೊಲೀಸ್ ಠಾಣೆ

ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ರೌಡಿ ಹಂದಿ ಅಣ್ಣಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಆರೋಪಿಗಳು ಪೊಲೀಸರ ಮುಂದೆ ಸರೆಂಡರ್ ಆಗಿದ್ದಾರೆ.

Handi Anni murder Accused surrendered in Chikmagalur SP office, Shivamogga Handi Anni murder case. Chikkamagaluru police station, Shivamogga crime news, ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶರಣು, ಶಿವಮೊಗ್ಗ ಹಂದಿ ಅಣ್ಣಿ ಕೊಲೆ ಪ್ರಕರಣ, ಚಿಕ್ಕಮಗಳೂರು ಪೊಲೀಸ್ ಠಾಣೆ, ಶಿವಮೊಗ್ಗ ಅಪರಾಧ ಸುದ್ದಿ,
ಹಂದಿ ಅಣ್ಣಿ ಕೊಲೆ
author img

By

Published : Jul 19, 2022, 10:56 AM IST

Updated : Jul 19, 2022, 2:01 PM IST

ಶಿವಮೊಗ್ಗ/ಚಿಕ್ಕಮಗಳೂರು: ಜುಲೈ 14ರಂದು ಶಿವಮೊಗ್ಗದ ವಿನೋಬನಗರದ ಪೊಲೀಸ್ ಠಾಣೆಯ ಮುಂಭಾಗದ ವೃತ್ತದಲ್ಲಿ ಹೊನ್ನಪ್ಪ ಅಲಿಯಾಸ್ ಹಂದಿ ಅಣ್ಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಎನ್‌ಕೌಂಟರ್ ಭಯದಿಂದ ಹಂದಿ ಅಣ್ಣಿಯನ್ನು ನಾವೇ ಕೊಲೆ ಮಾಡಿದ್ದು ಎಂದು ತಿಳಿಸಿ ಕಾರ್ತಿಕ್, ನಿತಿನ್, ಮನು, ಫಾರುಕ್, ಚಂದನ್, ಆಂಜನೇಯ, ಮಧುಸೂಧನ್ ಹಾಗು ಮಧು ಸೇರಿ ಒಟ್ಟು ಎಂಟು ಆರೋಪಿಗಳು ತಡರಾತ್ರಿ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.

ಹಂದಿ ಅಣ್ಣಿ ಕೊಲೆ ಆರೋಪಿಗಳ ಬಗ್ಗೆ ಎಸ್​ಪಿ ಹೇಳಿಕೆ

ಎಸ್ಪಿ ಹೇಳಿಕೆ: ಎಸ್.ಪಿ ಅಕ್ಷಯ್ ಪ್ರತಿಕ್ರಿಯಿಸಿ, ಹಂದಿ ಅಣ್ಣಿ ಹತ್ಯೆಗೈದ ಆರೋಪಿಗಳು ಘಟನೆಯನ್ನು ವಿವರಿಸಿದ್ದಾರೆ. ಶಿವಮೊಗ್ಗಕ್ಕೆ ಹೋದರೆ ಭಯವಿದೆ. ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿದು ಚಿಕ್ಕಮಗಳೂರಿಗೆ ಬಂದಿದ್ದಾರೆ. ಚಿಕ್ಕಮಗಳೂರಿಗೆ ಯಾಕೆ ಬಂದ್ರು ಎಂಬ ವಿಚಾರವನ್ನೂ ಹೇಳಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಇವರೇ ಆರೋಪಿಗಳು ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ಶಿವಮೊಗ್ಗ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಆರೋಪಿಗಳನ್ನು ಚಿಕ್ಕಮಗಳೂರು ಕೋರ್ಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು ನಂತರ ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ:

ಶಿವಮೊಗ್ಗ: ನಡು ರಸ್ತೆಯಲ್ಲೇ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಕೊಲೆ

ರೌಡಿಶೀಟರ್​ ಕೊಲೆ ಹಳೇ ವೈಷಮ್ಯದಿಂದಲೇ ನಡೆದಿದೆ ಎಂದ ಶಿವಮೊಗ್ಗ ಎಸ್​​​ಪಿ.. ಭಯ ಮೂಡಿಸುತ್ತಿದೆ ಸಿಸಿಟಿವಿ ದೃಶ್ಯ!

Last Updated : Jul 19, 2022, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.