ಶಿವಮೊಗ್ಗ : ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದ್ದು, ಭತ್ತದ ಸಸಿ ಮಡಿಗಳನ್ನು ಮಾಡಲು ರೈತರು ಗದ್ದೆಗಳಲ್ಲಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಮಳೆ ಬಿಡುವು ನೀಡಿದ ಕಡೆಗಳಲ್ಲಿ ಕೃಷಿ ಕಾರ್ಯಗಳು ಭರದಿಂದ ಸಾಗಿವೆ.
ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಶರಾವತಿ ಲಿಂಗನಮಕ್ಕಿ ಜಲಾಶಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜನಲಾಶಯಕ್ಕೆ 47,968 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂ ನೀರಿನ ಮಟ್ಟ 1775.25 ಅಡಿಯಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, 28,061 ಕ್ಯೂಸೆಕ್ ಒಳಹರಿವು ಇದೆ. 168 ಅಡಿ 8 ಇಂಚು ನೀರು ಸಂಗ್ರಹವಾಗಿದೆ.
ತುಂಗಾ ಜಲಾಶಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಜಲಾಶಯಕ್ಕೆ 58,770 ಕ್ಯೂಸೆಕ್ ಒಳಹರಿವು ಇದೆ. ಡ್ಯಾಂನಿಂದ 51,380 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನಗರದ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿ ಅಪಾಯದ ಮಟ್ಟಕ್ಕೇರಿದ್ದು, ಕೋರ್ಪಲಯ್ಯನ ಛತ್ರದ ತುಂಗಾ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 163.40 ಮಿಮಿ ಮಳೆಯಾಗಿದ್ದು, ಸರಾಸರಿ 23.24 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 291.57 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 9 ಮಿಮಿ., ಭದ್ರಾವತಿ 5.50 ಮಿಮಿ., ತೀರ್ಥಹಳ್ಳಿ 24.00 ಮಿಮಿ., ಸಾಗರ 59.40 ಮಿಮಿ., ಶಿಕಾರಿಪುರ 7.10 ಮಿಮಿ., ಸೊರಬ 14.30 ಮಿಮಿ. ಹಾಗೂ ಹೊಸನಗರ 33.70 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ:
ಜಲಾಶಯ | ಗರಿಷ್ಠ | ಇಂದಿನ ಮಟ್ಟ | ಒಳಹರಿವು(ಕ್ಯೂಸೆಕ್ನಲ್ಲಿ) | ಹೊರಹರಿವು (ಕ್ಯೂಸೆಕ್ನಲ್ಲಿ) | ಕಳೆದ ವರ್ಷ ನೀರಿನ ಮಟ್ಟ |
ಲಿಂಗನಮಕ್ಕಿ | 1,819 | 1,775.25 | 47,968.00 | 2,137.19 | 1,783.75 |
ಭದ್ರಾ | 186 | 168.8 | 28,016.00 | 146.00 | 155.9 |
ತುಂಗಾ | 588.24 | 587.27 | 58,770.00 | 51,386.00 | 588.24 |
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 48 ಗಂಟೆ ಭಾರೀ ಮಳೆ...