ಶಿವಮೊಗ್ಗ: ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಹೊರಗೆ ಬರುವುದೇ ಕಷ್ಟವಾಗಿದೆ. ಇದರಿಂದ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳಿಗೆ ಆಹಾರವಿಲ್ಲದೆ ಅಲೆದಾಡುತ್ತಿದ್ದವು. ಆದರೆ ಶಿವಮೊಗ್ಗದ ಅನಿಮಲ್ ರೆಸ್ಕ್ಯೂ ಕ್ಲಬ್ ಸದಸ್ಯರು ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳಿಗೆ ಆಹಾರ ನೀಡುತ್ತಿದ್ದಾರೆ.
ಅನಿಮಲ್ ರೆಸ್ಕ್ಯೂ ಕ್ಲಬ್ ತಂಡದ ಪ್ರಸಾದ್ ಎಂಬುವರ ಮನೆಯಲ್ಲಿ ಪ್ರಾಣಿಗಳಿಗೆ ಆಹಾರ ಸಿದ್ಧಪಡಿಸಲಾಗುತ್ತದೆ. ಇಲ್ಲಿ ಅನ್ನ ಬೇಯಿಸಿ, ಅದಕ್ಕೆ ಮೊಟ್ಟೆ, ಪೆಡಿಗ್ರಿ, ಚಿಕನ್ ಸೇರಿಸಿ ನಂತರ ಹಲವು ಏರಿಯಾಗಳಿಗೆ ತೆಗೆದುಕೊಂಡು ಹೋಗಿ ಅಡಿಕೆ ತಟ್ಟೆಯಲ್ಲಿ ನಾಯಿಗಳಿಗೆ ಊಟ ಹಾಕಲಾಗುತ್ತದೆ.
ಬೆಳಗ್ಗೆ ನಾಯಿಗಳಿಗೆ ಊಟ ಹಾಕಿ ಬಂದ್ರೆ, ಮಧ್ಯಾಹ್ನದ ವೇಳೆ ಬಿಡಾಡಿ ದನಗಳ ಬಳಿಗೆ ಹೋಗಿ ಅವುಗಳಿಗೂ ಸಹ ತರಕಾರಿಗಳನ್ನ ಹಾಕಿ ಬರುತ್ತಾರೆ. ತರಕಾರಿ ಹಾಗೂ ಅಕ್ಕಿ, ಮೊಟ್ಟೆಯನ್ನ ಎಪಿಎಂಸಿಯ ಕೆಲ ವರ್ತಕರು ದಾನವಾಗಿ ನೀಡುತ್ತಿದ್ದಾರೆ.