ETV Bharat / city

ಯಡಿಯೂರಪ್ಪ ನಮಗೆ ರಾಜಕೀಯ ಮರುಜನ್ಮ ನೀಡಿದವರು: ಕುಮಾರ್​ ಬಂಗಾರಪ್ಪ

ನಾನು ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಬಂಗಾರಪ್ಪ ಪ್ರಭಾವಳಿ, ಯಡಿಯೂರಪ್ಪ ಛಾಯೆ ಇದೆ. ಇದರಿಂದ ಮುಂದೆ ನಮಗೆ ಮಂತ್ರಿಸ್ಥಾನ ನೀಡಿದರೆ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಕೆಲಸ ಮಾಡಲಾಗುತ್ತದೆ ಎಂದು ಶಾಸಕ ಕುಮಾರ್​ ಬಂಗಾರಪ್ಪ ತಿಳಿಸಿದರು.

Kumar Bangarappa
ಕುಮಾರ್​ ಬಂಗಾರಪ್ಪ
author img

By

Published : Jul 27, 2021, 7:00 AM IST

ಶಿವಮೊಗ್ಗ: ಯಡಿಯೂರಪ್ಪ ನಮಗೆ ರಾಜಕೀಯ ಮರುಜನ್ಮ ನೀಡಿದವರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದಷ್ಟೇ, ಅವರು ಈಗಲೂ ನಮ್ಮ ಪಕ್ಷದ ನಾಯಕರೇ ಎಂದು ಸೊರಬ ಶಾಸಕ ಕುಮಾರ್​ ಬಂಗಾರಪ್ಪ ಹೇಳಿದರು.

ಯಡಿಯೂರಪ್ಪ ರಾಜೀನಾಮೆ ಕುರಿತು ಕುಮಾರ್​ ಬಂಗಾರಪ್ಪ ಪ್ರತಿಕ್ರಿಯೆ

ಯಡಿಯೂರಪ್ಪ ರಾಜೀನಾಮೆ ಕುರಿತು ಸೊರಬದಲ್ಲಿ ಮಾತನಾಡಿದ ಅವರು, ಬಂಗಾರಪ್ಪ, ಯಡಿಯೂರಪ್ಪ, ಜೆ.ಹೆಚ್.ಪಟೇಲ್ ಹಾಗೂ ಕಡಿದಾಳ್ ಮಂಜಪ್ಪನವರು ನಮ್ಮ ಜಿಲ್ಲೆಯವರೇ. ಅತಿ ಶೀಘ್ರದಲ್ಲಿ ಶಿವಮೊಗ್ಗ ಜಿಲ್ಲೆಯವರಿಗೆ ಸಿಎಂ ಸ್ಥಾನ ಸಿಗಬೇಕು ಎಂದರು.

ಯಡಿಯೂರಪ್ಪ ಅವರನ್ನೆ ಮುಂದುವರೆಸಬೇಕೆಂಬುದು ನಮ್ಮ ಆಶಯವಾಗಿತ್ತು. ನಾವು ಪಕ್ಷ, ಹೈಕಮಾಂಡ್ ತೀರ್ಮಾನದ ವಿರುದ್ಧ ಮಾತನಾಡುವಷ್ಟು ದೊಡ್ಡವರಲ್ಲ. ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ನಾನು ಪಕ್ಷದ ಸಿಪಾಯಿ, ಪಕ್ಷದ ತೀರ್ಮಾನಕ್ಕೆ ನಾವೆಲ್ಲಾ ಬದ್ದವಾಗಿರಬೇಕು ಅಂತ ಬಿಎಸ್​ವೈ ಹೇಳಿದ್ದಾರೆ. ಆದರೆ, ಸಿಎಂ ಆಗಿರಬೇಕಿತ್ತು. ನಮ್ಮ ತಾಲೂಕಿನ ಅನೇಕ ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಿದ್ದರು. ಅವರು ಸಿಎಂ ಆಗಿದ್ದ ಎರಡು ವರ್ಷ ನಮ್ಮ ತಾಲೂಕಿಗೆ ನೀಡಿದ ಕೊಡುಗೆಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.‌

ಯಾರು ಸಿಎಂ ಆಗ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ಯಾರು ಉತ್ತಮ ಕೆಲಸ ಮಾಡಿರುತ್ತಾರೋ ಅವರನ್ನು ಹುಡುಕಿ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆ. ಅರ್ಹತೆ, ರಾಜಕೀಯ ಸ್ಥಾನವಿದ್ದರೆ ಹುದ್ದೆ ನೀಡುತ್ತಾರೆ. ಸೊರಬಕ್ಕೆ ಅಂತಹ ಅವಕಾಶ ನೀಡಿದ್ರೆ, ಒಳ್ಳೆಯ ಅವಕಾಶ ಎಂದು ಭಾವಿಸುತ್ತೇವೆ.‌ ನಾನು ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಬಂಗಾರಪ್ಪ ಪ್ರಭಾವಳಿ, ಯಡಿಯೂರಪ್ಪ ಛಾಯೆ ಇದೆ. ಇದರಿಂದ ಮುಂದೆ ನಮಗೆ ಮಂತ್ರಿಸ್ಥಾನ ನೀಡಿದರೆ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಕೆಲಸ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ಪ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.