ETV Bharat / city

ದೇಶದ ಎಲ್ಲ ಮುಸಲ್ಮಾನರು ರಾಷ್ಟ್ರ ದ್ರೋಹಿಗಳಲ್ಲ: ಕೆ.ಎಸ್.ಈಶ್ವರಪ್ಪ - ಹುಬ್ಬಳ್ಳಿ ಘಟನೆ ಬಗ್ಗೆಈಶ್ವರಪ್ಪ ಮಾತು

ಹಿಂದು-ಮುಸ್ಲಿಮರ ಮಧ್ಯೆ ಕಾಂಗ್ರೆಸ್ ಪಕ್ಷ ಅಂತರ ಸೃಷ್ಟಿಸುತ್ತಿದೆ. ಎಲ್ಲ ಮುಸ್ಲಿಮರು ರಾಷ್ಟ್ರದ್ರೋಹಿಗಳಲ್ಲ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

eshwarappa
ಈಶ್ವರಪ್ಪ
author img

By

Published : Apr 23, 2022, 3:26 PM IST

Updated : Apr 23, 2022, 3:45 PM IST

ಶಿವಮೊಗ್ಗ: ದೇಶದ ಎಲ್ಲ ಮುಸ್ಲಿಮರು ರಾಷ್ಟ್ರ ದ್ರೋಹಿಗಳಲ್ಲ. ಹಿಂದು- ಮುಸಲ್ಮಾನರನ್ನು ಕಾಂಗ್ರೆಸ್ ಬೇರೆ ಬೇರೆ ಮಾಡುತ್ತಿದೆ. ಮತ್ತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಾರೆ. ಕಾಂಗ್ರೆಸ್​ ನಾಯಕರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರಿಗೆ ಹೇಳಿದರು.

ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ಕಂಡ ಕೂಡಲೇ ಅವರು ಪಾಕಿಸ್ತಾನದವರು, ಉಗ್ರಗಾಮಿಗಳು ಎಂಬ ಭಾವನೆಯನ್ನು ದೂರ ತಳ್ಳಿ. ಅವರನ್ನು ನಮ್ಮತ್ತ ಸೆಳೆಯುವಂತಹ ಪ್ರಯತ್ನ ಮಾಡಬೇಕು. ಕಾಂಗ್ರೆಸ್​ನ ಮೇಕೆದಾಟು, ಜೆಡಿಎಸ್​ನ ಜಲಧಾರೆ ಅವರಿಗೆ ಒಂದೇ ಒಂದು ವೋಟು ತರಲ್ಲ. ಹಣ, ಜಾತಿ ಪಕ್ಕಕ್ಕೆ ಸರಿಸಿ, ಕಾಂಗ್ರೆಸ್​ನವರ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಬೇಕು ಎಂದರು.

ದೇಶದ ಎಲ್ಲ ಮುಸಲ್ಮಾನರು ರಾಷ್ಟ್ರ ದ್ರೋಹಿಗಳಲ್ಲ: ಕೆ.ಎಸ್.ಈಶ್ವರಪ್ಪ

ಹುಬ್ಬಳ್ಳಿಯಲ್ಲಿನ ಘಟನೆಗೆ ಕಾರಣನಾದ ಮಾಸ್ಟರ್​ ಮೈಂಡ್​ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಜನರನ್ನು ಸೇರಿಸಿದ್ದು ಹೌದು. ಆದರೆ, ಕಲ್ಲು ಹೊಡೆಸಿದ್ದು ನಾನಲ್ಲ ಎಂದು ಹೇಳುತ್ತಿದ್ದಾನೆ. 2 ಸಾವಿರ ಜನರನ್ನು ಹೇಗೆ ಸೇರಿಸಿದ ಅವನಿಗೆ ಸ್ಫೂರ್ತಿ ಯಾರು ಎಂದು ಪ್ರಶ್ನಿಸಿದ ಈಶ್ವರಪ್ಪ, ಈ ಘಟನೆಯಿಂದ ಎಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಭಾರತ ಜನತೆಯ ಹೃದಯ ಗೆಲ್ಲುವ ಜೊತೆಗೆ ವಿಶ್ವದ ಗಮನವನ್ನು ಸೆಳೆದಿದೆ. ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅನೇಕ ಜನಪರ ಯೋಜನೆಗಳು ಮನೆ ಮನೆ ತಲುಪುತ್ತಿದೆ ಎಂದರು.

ಇದನ್ನೂ ಓದಿ: ಎಸ್‌ಸಿ-ಎಸ್ಟಿ ಅನುದಾನ ಕಡಿತ ಮಾಡಿ ಫ್ರೀ ವಿದ್ಯುತ್‌ ಎಂದು ಕಣ್ಣಿಗೆ ಮಣ್ಣೆರೆಚಿದ್ರೇ ಹೇಗಪ್ಪಾ.. ಸಿದ್ದರಾಮಯ್ಯ ಪ್ರಶ್ನೆ

Last Updated : Apr 23, 2022, 3:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.