ETV Bharat / city

ಶಿವಮೊಗ್ಗದಲ್ಲಿಂದು 129 ಮಂದಿಗೆ ಕೊರೊನಾ, ಮೂವರು ಸಾವು

ಶಿವಮೊಗ್ಗ ಜಿಲ್ಲೆಯಲ್ಲಿಂದು 129 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ.

Corona positive for 129 in Shimoga district
ಶಿವಮೊಗ್ಗದಲ್ಲಿಂದು 129 ಮಂದಿಗೆ ಕೊರೊನಾ..ಮೂವರು ಸಾವು
author img

By

Published : Aug 1, 2020, 8:45 PM IST

ಶಿವಮೊಗ್ಗ: ಜಿಲ್ಲೆಯಲ್ಲಿಂದು 129 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,952ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾಗೆ ಮೂವರು ಬಲಿಯಾಗಿದ್ದು, ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 21 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 1,024 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ, ಕೋವಿಡ್ ಆಸ್ಪತ್ರೆಯಲ್ಲಿ 242, ಕೋವಿಡ್ ಕೇರ್ ಸೆಂಟರ್​ನಲ್ಲಿ 530, ಖಾಸಗಿ ಆಸ್ಪತ್ರೆಯಲ್ಲಿ 47, ಮನೆಯಲ್ಲಿ 72 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ತಾಲೂಕುವಾರು ಸೋಂಕಿತರ ವಿವರ ಹೀಗಿದೆ:

ಶಿವಮೊಗ್ಗ 59, ಭದ್ರಾವತಿ 32, ತೀರ್ಥಹಳ್ಳಿ 7, ಶಿಕಾರಿಪುರ 23, ಸಾಗರ 2, ಹೊಸನಗರ 3 ಹಾಗೂ ಬೇರೆ ಜಿಲ್ಲೆಯಲ್ಲಿ 5 ಜನರು ಸೇರಿ ಒಟ್ಟು 129 ಮಂದಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೂ 370 ಕಂಟೈನ್‌ಮೆಂಟ್‌ ಝೋನ್ ರಚನೆ ಮಾಡಲಾಗಿದೆ. ಇದರಲ್ಲಿ 97 ಕಂಟೈನ್‌ಮೆಂಟ್‌ ಝೋನ್ ವಿಸ್ತರಣೆ ಮಾಡಲಾಗಿದೆ.

ಇಂದು 387 ಜನರ ಗಂಟಲು ದ್ರವ ಪಡೆಯಲಾಗಿದ್ದು, ಇದರಲ್ಲಿ 316 ಜನರ ವರದಿ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ 27, 953 ಜನರ ಗಂಟಲು ದ್ರವ ಪಡೆಯಲಾಗಿದ್ದು, ಇದರಲ್ಲಿ 25,706 ಜನರ ವರದಿ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.