ETV Bharat / city

ಶಿವಮೊಗ್ಗ ಪೊಲೀಸರ ಮಿಂಚಿನ ಕಾರ್ಯಾಚರಣೆ.. ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಅರೆಸ್ಟ್ - ಶಿವಮೊಗ್ಗದಲ್ಲಿ ಕೊಲೆಗೆ ಯೋಜನೆ

ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ- ಕೊಲೆಗೆ ಸ್ಕೆಚ್​ ಹಾಕಿದ್ದ ಆರೋಪಿಗಳು ಅಂದರ್​- ಮಾರಕಾಸ್ತ್ರ ವಶಕ್ಕೆ

Arrest of two people who sketched the murder in Shivamogga
ಕೊಲೆಗೆ ಸ್ಕೇಚ್ ಹಾಕಿದ್ದ ಇಬ್ಬರ ಬಂಧನ
author img

By

Published : Jul 18, 2022, 7:10 PM IST

ಶಿವಮೊಗ್ಗ: ನಗರದಲ್ಲಿ ಮತ್ತೊಂದು ಕೊಲೆಗೆ ಸ್ಕೆಚ್ ಹಾಕಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಿಘ್ನೇಶ್ ಹಾಗೂ ಕಿರಣ್ ಬಂಧಿತರು. ಇವರು ಹಂದಿ ಅಣ್ಣಿಯ ಸಹಚರನಾದ ಅನಿಲ್ ಅಲಿಯಾಸ್ ಅಂಬುನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಅನಿಲ್ ಕೊಲೆಗೆ ವಿಘ್ನೇಶ್, ಕಿರಣ್ ಜೊತೆ ಚಂದನ್ ಎಂಬಾತ ಸಹ ಸ್ಕೆಚ್ ಹಾಕಿದ್ದನಂತೆ. ಸದ್ಯ ಕಿರಣ್ ಹಾಗೂ ವಿಘ್ನೇಶ್ ಬಂಧನವಾಗಿದ್ದು, ಇನ್ನೋರ್ವ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಮೂವರು ಅನಿಲ್​ನನ್ನು ಕೊಲ್ಲಲು ಆಯುಧಗಳನ್ನು ಖರೀದಿ ಮಾಡಿದ್ದರು. ಆಯುಧಗಳನ್ನು ಬುದ್ಧ ನಗರದಲ್ಲಿರುವ ವಿಘ್ನೇಶ್ ಮನೆಯಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗ್ತಿದೆ.

ವಿನೋಬನಗರ ಪೊಲೀಸ್ ಠಾಣೆಯ ಪಿಎಸ್​ಐ ರವಿ ಕುಮಾರ್ ಅವರು ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ಬಂಧಿಸುವ ಸಲುವಾಗಿ ತಪಾಸಣೆ ನಡೆಸುವಾಗ ಈ ಕೊಲೆ ಸ್ಕೆಚ್ ಬಯಲಾಗಿದೆ. ಅನಿಲ್ ಬಂಕ್ ಬಾಲು ಕೊಲೆಯಲ್ಲಿ ಪ್ರಮುಖನಾಗಿದ್ದ. ಇದರಿಂದ ಹಂದಿ ಅಣ್ಣಿಯ ಕೊಲೆಗೂ ಮುನ್ನ ಅನಿಲ್ ಕೊಲೆಗೆ ಆರೋಪಿಗಳು ಮುಹೂರ್ತ ಇಟ್ಟಿದ್ದರು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆ್ಯಪ್​ ಸಹಾಯದಿಂದ 2019 ರಲ್ಲಿ ಕಳ್ಳತನವಾಗಿದ್ದ ಬುಲೆಟ್​ ಬೈಕ್ ಪತ್ತೆ!: ಅದು ಹೇಗೆ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.