ETV Bharat / city

'ಸಾಮಾನ್ಯ ಪೊಲೀಸರಿಂದ ಸೈಬರ್​​ ಅಪರಾಧ ತಡೆಯಲು ಸಾಧ್ಯವಾಗದ ಮಾತು' - ಗಾಂಜಾ ಮಾರಾಟ ಪ್ರಕರಣಗಳ ಹೆಚ್ಚಳ

ಸೈಬರ್ ಅಪರಾಧ ತಡೆಯಲು ಸಾಮಾನ್ಯ ಪೊಲೀಸರಿಂದ ಸಾಧ್ಯವಿಲ್ಲ ಎಂದು ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್ ಅಭಿಪ್ರಾಯಪಟ್ಟಿದ್ದಾರೆ.

Amrit Paul talking about shivamogga cyber crime
ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್
author img

By

Published : Dec 18, 2019, 9:08 PM IST

ಶಿವಮೊಗ್ಗ: ಸೈಬರ್ ಅಪರಾಧ ತಡೆಯಲು ಸಾಮಾನ್ಯ ಪೊಲೀಸರಿಂದ ಸಾಧ್ಯವಿಲ್ಲ. ಅದಕ್ಕೆ ನುರಿತ ಪೊಲೀಸರು ಮತ್ತು ಜಾಗೃತಿ ಅಗತ್ಯ ಎಂದು ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪ್ರೆಸ್​​​ ಟ್ರಸ್ಟ್​​​ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿದೇಶದ ಯಾವುದೋ ಮೂಲೆಯಲ್ಲಿ ಕೂತು ಸೈಬರ್ ಮೂಲಕ ಅಪರಾಧ ನಡೆಸುತ್ತಾನೆ. ಅದನ್ನು ಪತ್ತೆ ಹಚ್ಚಲು ಪೊಲೀಸರಿಗೂ ಸೂಕ್ತ ತರಬೇತಿ ಅವಶ್ಯಕ ಎಂದರು.

ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್..

ಪೂರ್ವ ವಲಯದ ವಿಭಾಗದಲ್ಲಿ ಶಿವಮೊಗ್ಗ ಸುಂದರವಾದ ಜಿಲ್ಲೆ. ಇಲ್ಲಿ ಕಾನೂನು‌ ಸುವ್ಯವಸ್ಥೆ ಸರಿಯಾಗಿದೆ ಎಂದ ಅವರು, ಅಮ್ರಿತ್ ಪೌಲ್ ಅವರು ಈ ಹಿಂದೆ ನಕ್ಸಲ್ ನಿಗ್ರಹ ದಳದ ಅಧಿಕಾರಿಯಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ ಕುರಿತು ತಮ್ಮ ನೆನಪನ್ನು ಹಂಚಿಕೊಂಡರು. ಗಾಂಜಾ ಮಾರಾಟ ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ. ಗಾಂಜಾ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕಿಂತ ಅದನ್ನು ಬೆಳೆಯುವುದನ್ನು ತಡೆಯಬೇಕಿದೆ ಎಂದರು.

ಇತ್ತಿಚೇಗೆ ಐಜಿಪಿ ನೇತೃತ್ವದ ತಂಡ ನಡೆಸುತ್ತಿರುವ ಮರಳು, ಜೂಜು ಅಡ್ಡೆಗಳ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪೌಲ್, ಜಿಲ್ಲೆಯಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ. ನಮ್ಮ ಕಚೇರಿಯಲ್ಲಿ ಇಬ್ಬರು ಡಿವೈಎಸ್ಪಿ,‌ ಇನ್ಸ್‌ಪೆಕ್ಟರ್ಸ್‌ ಇದ್ದಾರೆ. ಅವರೂ ಸಹ ಕೆಲಸ ಮಾಡಲಿ ಬಿಡಿ ಎಂದು ತಮ್ಮ ನೇತೃತ್ವದ ತಂಡದ ದಾಳಿ ಸಮರ್ಥಿಸಿಕೊಂಡರು. ಮಟ್ಕಾ, ಜೂಜಾಟಕ್ಕೆ ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

Intro:ಸೈಬರ್ ಕ್ರೈಂ ತಡೆಯಲು ಸಾಮಾನ್ಯ ಪೊಲೀಸರಿಂದ ಸಾಧ್ಯವಿಲ್ಲ.ಅದಕ್ಕೆ ನುರಿತ ಪೊಲೀಸರ ಅಗತ್ಯವಿದೆ, ಅಲ್ಲದೆ ಸೈಬರ್ ಕ್ರೈಂ ತಡೆಯಲು ಜಾಗೃತಿ ಒಂದೇ ಮಾರ್ಗ ಎಂದು ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್ ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸೈಬರ್ ಕ್ರೈಂಅನ್ನು ಯಾರೂ ವಿದೇಶದ ಯಾವುದೂ ಮೂಲೆಯಲ್ಲಿ ಕುಳಿತು ಕೊಂಡು ನಡೆಸುತ್ತಾನೆ. ಅದನ್ನು ಪತ್ತೆ ಹಚ್ಚಲು ಪೊಲೀಸರಿಗೂ ಸೂಕ್ತ ತರಬೇತಿ ಬೇಕು ಎಂದರು.

Body:ಪೂರ್ವ ವಲಯದ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ಸುಂದರವಾದ ಜಿಲ್ಲೆ, ಇಲ್ಲಿ ಕಾನೂನು‌ ಸುವ್ಯವಸ್ಥೆ ಸರಿಯಾಗಿದೆ. ಅಮ್ರಿತ್ ಪೌಲ್ ರವರು ಹಿಂದೆ ನಕ್ಸಲ್ ನಿಗ್ರಹ ದಳದ ಅಧಿಕಾರಿಯಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ನೆನಪನ್ನು ಹಂಚಿ ಕೊಂಡರು. ಗಾಂಜಾ ಮಾರಾಟದ ಕೇಸ್ ನ್ನು ಶಿವಮೊಗ್ಗದಲ್ಲಿ ಹೆಚ್ಚೆಚ್ಚು‌ ದಾಖಲು ಮಾಡಿ ಕೊಳ್ಳಲಾಗುತ್ತಿದೆ. ಗಾಂಜಾ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕಿಂತ ಅದನ್ನು ಬೆಳೆಯುವುದನ್ನು ತಡೆಯಬೇಕಿದೆ, ಇದರಿಂದ ಗಾಂಜಾ ಮಾರಾಟ ಕಡಿಮೆಯಾಗುತ್ತದೆ ಎಂದರು.

Conclusion:ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತಿಚೇಗೆ ಐಜಿಪಿ ತಂಡದವರು ನಡೆಸುತ್ತಿರುವ ಮರಳು, ಇಸ್ಪಿಟ್ ಅಡ್ಡೆಗಳ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪೌಲ್, ಜಿಲ್ಲೆಯಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳಿರುತ್ತಾರೆ. ಆದರೂ ನಮ್ಮ ಕಚೇರಿಯಲ್ಲಿ ಇಬ್ಬರು ಡಿವೈಎಸ್ಪಿ,‌ಇನ್ಸ್ ಪೆಕ್ಟರ್ ಗಳಿರುತ್ತಾರೆ, ಅವರು ಸಹ ಕೆಲ್ಸ ಮಾಡಲಿ ಬಿಡಿ ಎಂದು ತಮ್ಮ ನೇತೃತ್ವದ ತಂಡದ ದಾಳಿಯನ್ನು ಸಮರ್ಥಿಸಿ ಕೊಂಡರು. ಮಟ್ಕಾ, ಜೂಜಾಟವನ್ನು ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಈ ವೇಳೆ ಎಸ್ಪಿ ಶಾಂತರಾಜು ಹಾಗೂ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹಾಜರಿದ್ದರು.

ಬೈಟ್: ಅಮ್ರಿತ್ ಪೌಲ್. ಐಜಿಪಿ. ಪೂರ್ವ ವಲಯ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.