ಶಿವಮೊಗ್ಗ: ತಾಯಿಗೆ ತಾಯಿಯೇ ಸಾಟಿ, ಅಮ್ಮ ತೀರಿಹೋದಾಗ ಪ್ರತಿಯೊಬ್ಬರಿಗೂ ಅನಾಥ ಭಾವ ಕಾಡದೇ ಇರದು. ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿನಿ ಅಗಲಿದ ತಾಯಿಯ ಶವ ಮನೆಯಲ್ಲಿದ್ರೂ ಕೂಡ ಪರೀಕ್ಷೆ ಬರೆಯುವ ಮೂಲಕ ಶಿಕ್ಷಣದ ಮಹತ್ವ ಸಾರಿ ಮಾದರಿಯಾದಳು.
ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪುತ್ರಿ ಸ್ಪೂರ್ತಿ, ತಾಯಿಯ ಸಾವಿನ ನೋವಿನಲ್ಲೇ ಪರೀಕ್ಷೆ ಬರೆದಿದ್ದಾಳೆ. ನಾಗರಾಜ್ ಅವರ ಹೆಂಡತಿ ಅನುರಾಧ ಅನಾರೋಗ್ಯದಿಂದ ಸೊಮವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಸಂಬಂಧಿಕರು ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಸ್ಪೂರ್ತಿ ನಿನ್ನೆ ನಡೆದ ಬಿಎಸ್ಸಿ ಕೃಷಿ ಪದವಿ ಪ್ರವೇಶ ಪ್ರಾಯೋಗಿಕ ಪರೀಕ್ಷೆಯನ್ನು ಬರೆದು ಬಂದಿದ್ದಾಳೆ. ಮಗಳು ಪರೀಕ್ಷೆ ಬರೆದು ಬಂದ ಬಳಿಕ ತಾಯಿಯ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಮಾನವರಹಿತ ಯುದ್ಧ ವಿಮಾನ ಪರೀಕ್ಷೆ ಯಶಸ್ವಿ: ವಿಡಿಯೋ