ETV Bharat / city

ಶಿವಮೊಗ್ಗದಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿದ 295 ವಾಹನಗಳ ಜಪ್ತಿ - ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘಿಸಿ ಸಂಚಾರ ಮಾಡಿದ 200ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಜಪ್ತಿ​ ಮಾಡಿ, ಒಂದು ಲಕ್ಷ ರೂ.ಗೂ ಹೆಚ್ಚು ದಂಡದ ಮೊತ್ತ ವಸೂಲಿ ಮಾಡಿದ್ದಾರೆ.

shivamogga
ಶಿವಮೊಗ್ಗದಲ್ಲಿ ಕರ್ಫ್ಯೂ ನಿಯಮ ಉಲ್ಲಂಘಿಸಿದ 295 ವಾಹನಗಳು ಜಪ್ತಿ
author img

By

Published : May 8, 2021, 7:29 AM IST

ಶಿವಮೊಗ್ಗ: ಜನತಾ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ 235 ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 247 ದ್ವಿಚಕ್ರ ವಾಹನಗಳು, 39 ಕಾರುಗಳು ಹಾಗು 9 ಆಟೋಗಳು ಸೇರಿ 295 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು 235 ಪ್ರಕರಣಗಳನ್ನು ದಾಖಲಿಸಿ, 1,49,100 ರೂ. ದಂಡ ವಸೂಲಿ ಮಾಡಲಾಗಿದೆ.

ಕರ್ಫ್ಯೂ ನಿಯಮ ಉಲ್ಲಂಘಿಸಿದ ಅಂಗಡಿಯ ಮಾಲೀಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿ ಮಾಳೂರು ಠಾಣೆಯಲ್ಲಿ 02, ಕೋಟೆ ಠಾಣೆಯಲ್ಲಿ 01 ಮತ್ತು ತೀರ್ಥಹಳ್ಳಿಯಲ್ಲಿ 01 ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳನ್ನು ದಾಖಲಿಸಲಾಗಿದೆ.

ಓದಿ: ಜಿಂದಾಲ್​​ಗೆ ಭೂಮಿ ಪರಾಭಾರೆ: ಸ್ವಪಕ್ಷೀಯರಿಂದಲೇ ವಿರೋಧ, ಸಿಎಂಗೆ ಯತ್ನಾಳ್ & ಟೀಂ ಪತ್ರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.