ETV Bharat / city

ಸ್ನಾನದ ಕೋಣೆಗೆ ನುಗ್ಗಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ - ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಕೆರೆಕೊಪ್ಪದ ನಿವಾಸಿ ಆನಂದ ನಾಯ್ಕರ್ ಅವರ ಸ್ನಾನದ ಕೋಣೆಯಲ್ಲಿ ಅಡಗಿ ಕುಳಿತಿದ್ದ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ‌ ಸ್ನೇಕ್ ಕಿರಣ್ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಶಿವಮೊಗ್ಗದಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

author img

By

Published : Apr 11, 2022, 1:25 PM IST

ಶಿವಮೊಗ್ಗ: ಬೇಸಿಗೆಯ ಈ ಅವಧಿಯಲ್ಲಿ ಹಾವುಗಳು ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿವೆ. ಆಹಾರ ಅರಸುತ್ತಾ ಉರಗಗಳು ಕಾಡಿನಿಂದ ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಮನೆಯೊಂದರ ಸ್ನಾನದ ಕೋಣೆಗೆ ನುಗ್ಗಿದ್ದ 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಶಿವಮೊಗ್ಗದ ಉರಗ ರಕ್ಷಕ‌ ಸ್ನೇಕ್ ಕಿರಣ್ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಮಂಡಗದ್ದೆ ಹೋಬಳಿಯ ಕೆರೆಕೊಪ್ಪದ ನಿವಾಸಿ ಆನಂದ ನಾಯ್ಕರ್ ಅವರ ಸ್ನಾನದ ಕೋಣೆಯಲ್ಲಿ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಹಾವನ್ನು ಕಂಡು ಭಯಭೀತರಾದ ಮನೆ ಮಾಲೀಕ, ಕೂಡಲೇ ಉರಗ ರಕ್ಷಕ‌ ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಗ್ರಾಮಕ್ಕೆ ತೆರಳಿದ ಸ್ನೇಕ್ ಕಿರಣ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಕಾಳಿಂಗವನ್ನು ರಕ್ಷಿಸಿದರು.

ಶಿವಮೊಗ್ಗದಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಈ ವೇಳೆ ಕಾಳಿಂಗ ಸರ್ಪ ಕಿರಣ್​ ಮೇಲೆ ದಾಳಿ ಮಾಡಲು ಯತ್ನಿಸಿತು. ನಂತರ ಅದನ್ನು ಸುರಕ್ಷಿತವಾಗಿ ಕಿರಣ್ ಸೆರೆ ಹಿಡಿದರು. ಬಳಿಕ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ಕಾಡಿಗೆ ಬಿಡಲಾಯಿತು.

ಇದನ್ನೂ ಓದಿ: ಅಡುಗೆ ಮನೆಯಲ್ಲಿದ್ದ ಚಂಬಿನ ಒಳಗೆ ಬೆಚ್ಚಗೆ ಮಲಗಿದ್ದ ನಾಗರಹಾವು.. ಮುಂದೇನಾಯ್ತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.