ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಏಪ್ರಿಲ್ 26ರಂದು ಮೂರು ಮರಿಗಳು ಜನಿಸಿವೆ. ಈ ಮೂರು ಹುಲಿ ಮರಿಗಳು ಗಂಡು ಹುಲಿಯಾದ 'ರಾಕಿ' ಮತ್ತು ಹೆಣ್ಣು ಹುಲಿ 'ತಾರಳಿ'ಗೆ ಜನಿಸಿವೆ. ತಾಯಿ ಮತ್ತು ಮರಿಗಳ ಮೇಲೆ ಪ್ರಾಣಿ ಪಾಲಕರು ಮತ್ತು ಮೃಗಾಲಯದ ವೈದ್ಯರು ನಿಗಾ ಇಟ್ಟಿದ್ದಾರೆ.
ತಾರಾ ಹುಲಿಗೆ 8 ವರ್ಷವಾಗಿದ್ದು, ರಾಕಿ ಹುಲಿಗೆ ನಾಲ್ಕು ವರ್ಷವಾಗಿದೆ. ಪ್ರಸ್ತುತ ಮೈಸೂರು ಮೃಗಾಲಯದಲ್ಲಿ 9 ಗಂಡು ಹುಲಿಗಳು ಮತ್ತು 7 ಹೆಣ್ಣು ಹುಲಿಗಳಿವೆ. ಇದೀಗ ಮೂರು ಹುಲಿ ಮರಿಗಳ ಜನನವಾಗಿದೆ.