ಮೈಸೂರು: ಖದೀಮನೋರ್ವ ಚಿನ್ನಾಭರಣದ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ಕದಿಯಲು ವಿಫಲ ಯತ್ನ ನಡೆಸಿ ವಾಪಸ್ ಆದ ಘಟನೆ ನಾರಾಯಣಶಾಸ್ತ್ರಿ ರಸ್ತೆಯ ಚಿನ್ನಾಭರಣದ ಅಂಗಡಿಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮೇಘ ಜ್ಯುವೆಲ್ಲರ್ ಅಂಗಡಿಗೆ ಹೆಲ್ಮೆಟ್ ಹಾಕಿಕೊಂಡು ನುಗ್ಗಿದ್ದ ಕಳ್ಳ, ಅಲ್ಲಿದ್ದ ಕೆಲಸಗಾರರನ್ನು ಹೆದರಿಸಿ ಚಿನ್ನಾಭರಣ ಹಾಗೂ ಹಣ ಕದಿಯಲು ಯತ್ನಿಸಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಕೆಸಗಾರರು ಕಿರುಚಾಡಿದ್ದಾರೆ. ಇದರಿಂದ ಹೆದರಿದ ಕಳ್ಳ ತಾನು ಬಂದಿದ್ದ ದ್ವಿಚಕ್ರ ವಾಹನದಲ್ಲಿ ಮಚ್ಚನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಕೆ.ಆರ್ ಠಾಣಾ ಪೊಲೀಸರು, ಪ್ರಕರಣ ದಾಖಲಿಸಿಗೊಂಡು ತನಿಖೆ ನಡೆದ್ದಾರೆ.