ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಎಲ್ಲ ಪಕ್ಷದವರು ಬೆಂಬಲ ಕೇಳುತ್ತಿದ್ದಾರೆ. ನಾನು ಮಾತ್ರ ತಟಸ್ಥಳಾಗಿದ್ದೇನೆ. ನನ್ನ ಮುಂದಿನ ರಾಜಕೀಯ ನಿಲುವು ನಿರ್ಧಾರ ಮಾಡೋರು ಜನರು. ಮೊದಲು ಜನರ ಬಳಿ ಚೆರ್ಚೆ ಮಾಡುತ್ತೇನೆ. ನಂತರ ರಾಜಕೀಯ ನಿಲುವು ಸ್ಪಷ್ಟ ಪಡಿಸುತ್ತೇನೆ ಎಂದು ಸಂಸದೆ ಸುಮಲತಾ ಸ್ಪಷ್ಟನೆ ನೀಡಿದರು.
ಮುಂದಿನ ದಿನಗಳಲ್ಲಿ ಬೇರೆ ಪಕ್ಷ ಸೇರುವ ಬಗ್ಗೆ ಮಾತಾನಾಡಿದ ಸುಮಲತಾ: ನನ್ನ ಸಿದ್ಧಾಂತ ಮತ್ತು ನನ್ನ ವಿಚಾರಗಳಿಗೆ ಪಕ್ಷಗಳು ಒಪ್ಪಿದರೆ ಸೇರುತ್ತೇನೆ. ಆದರೆ, ಜನರ ಬಳಿ ನಿರ್ಧಾರ ಕೇಳಿ ಅವರು ಏನು ಹೇಳುತ್ತಾರೋ ಅದರಂತೆ ನಿರ್ಧಾರ ತೆಗೆದು ಕೊಳ್ಳುತ್ತೇನೆ. ಸಮಯ ಸಂದರ್ಭ ನೋಡಿ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದರು.
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್, ವಾಕ್ ಮತ್ತು ಶ್ರವಣ ಸಂಸ್ಥೆಯ ಕ್ಯಾಂಪಸ್ ವೀಕ್ಷಣೆ ಮಾಡಿ, ಅಧಿಕಾರಿಗಳ ಜೊತೆ ವಿವಿ ಯೋಜನಗೆಳ ಬಗ್ಗೆ ಚರ್ಚೆ ನಡೆಸಿದರು. ಧ್ವನಿ ಹಾಗೂ ಕಿವಿ ಸಮಸ್ಯೆ ಇರುವ ಮಕ್ಕಳ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಇವರ ಸೇವೆಯನ್ನು ಮಂಡ್ಯಕ್ಕೂ ವಿಸ್ತರಣೆ ಮಾಡಬೇಕಿದೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಮಾತನಾಡಲು ಬಂದಿದ್ದೆ ಎಂದು ತಿಳಿಸಿದರು.
ಇದನ್ನೂ ಓದಿ: ಮದುವೆಯಾಗುವುದಾಗಿ ಯುವತಿ ಮೇಲೆ ಅತ್ಯಾಚಾರ : ಸಂತ್ರಸ್ತೆಯ ಸಂಬಂಧಿಕರಿಗೆ ಬೆತ್ತಲೆ ಫೋಟೊ ಕಳಿಸಿದ ಕೀಚಕ