ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಮುಲ್ ಸೋಲಿನಿಂದ ಹತಾಶೆಗೊಂಡು ಸಾವಿಗೆ ಶರಣಾದ ಕೆ ಸಿ ಬಲರಾಮ್ ಅವರ ಅಂತಿಮ ದರ್ಶನ ಪಡೆದರು.
ಮೈಮುಲ್ ಸೋಲಿನಿಂದ ಬೇಸರಗೊಂಡಿದ್ದ ಕೆ ಸಿ ಬಲರಾಮ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಕಂಡ ಕೂಡಲೇ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಸಿದ್ದರಾಮಯ್ಯ ಅವರು ಬಲರಾಮ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಶಾಸಕರಾದ ಜಿ ಟಿ ದೇವೇಗೌಡ, ಅಶ್ವಿನ್ಕುಮಾರ್, ಅನಿಲ್ ಚಿಕ್ಕಮಾದು, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಹಾಗೂ ಗಣ್ಯರು ಅಂತಿಮ ದರ್ಶನ ಪಡೆದರು.