ಮೈಸೂರು/ಹೊಸದಿಲ್ಲಿ: ಧನ ಸಹಾಯ ಆಯೋಗದ ಮುಖ್ಯಸ್ಥರಾದ ಡಿ.ಪಿ.ಸಿಂಗ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿದ ರಾಜ್ಯ ಸಂಸದರು, ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸಭೆ ನಡೆಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2013-14 ರಿಂದ ಯುಜಿಸಿ ತನ್ನ ಮಾನ್ಯತೆಯನ್ನ ರದ್ದು ಮಾಡಿದ ನಂತರ 2018 ರ ವರೆಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದ್ದು, ಅವರ ಸರ್ಟಿಫಿಕೇಟ್ಗಳಿಗೆ ಮಾನ್ಯತೆ ನೀಡಿ, ನ್ಯಾಯ ಒದಗಿಸಿ ಕೊಡಬೇಕೆಂದು ಸಂಸದರು ಒತ್ತಾಯಿಸಿದರು.
ಸಚಿವ ಸುರೇಶ್ ಅಂಗಡಿ ಅವರ ನೇತೃತ್ವದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಗದ್ದಿ ಗೌಡರ್, ಕರಡಿ ಸಂಗಣ್ಣ, ಭಗವಂತ್ ಖೂಬಾ ಮತ್ತು ಪ್ರತಾಪ್ ಸಿಂಹ ಅವರು ಯುಜಿಸಿ ಮುಖ್ಯಸ್ಥರಾದ ಡಿ.ಪಿ ಸಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.