ETV Bharat / city

ಸದ್ದಿಲ್ಲದೇ  25 ದಿನ ಸೇವಾ ಕಾರ್ಯ ಮಾಡಿದ ಮಾಜಿ ಶಾಸಕ

ಜನತಾ ಕರ್ಫ್ಯೂ ದಿನದಿಂದ ಹಿಡಿದು ಇಲ್ಲಿಯ ವರಗೂ ಮೈಸೂರು ಅರಮನೆಯ ಸುತ್ತಮುತ್ತ, ದೇವರಾಜು ಅರಸು ರಸ್ತೆ, ಜೆಕೆ ಮೈದಾನ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್​ ನೀಡುವ ಮೂಲಕ ಕೆ. ಆರ್​. ಕ್ಷೇತ್ರದ ಮಾಜಿ ಶಾಸಕ ಎಂ. ಕೆ. ಸೊಮಶೇಖರ್​ ಮಾನವೀಯತೆ ಮೆರೆಯುತ್ತಿದ್ದಾರೆ.

mk-somashekhar-providing-food-kit-in-mysore
ಶಾಸಕ ಎಂ. ಕೆ. ಸೋಮಶೇಖರ್​
author img

By

Published : Apr 28, 2020, 6:04 PM IST

ಮೈಸೂರು: ಬಲಗೈಲಿ ದಾನ ಮಾಡಿದರೆ ಎಡಗೈಗೆ ತಿಳಿಯಬಾರದು ಎಂಬಂತೆ ಲಾಕ್​ಡೌನ್​ ಜಾರಿಯಾದಾಗಿನಿಂದಲೂ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಹಸಿವು ನೀಗಿಸುವ ಮೂಲಕ ಕೆ. ಆರ್​. ಕ್ಷೇತ್ರದ ಮಾಜಿ ಶಾಸಕ ಎಂ. ಕೆ. ಸೊಮಶೇಖರ್​ ಸುಮಾರು 25 ದಿನಗಳಿಂದ ಸೇವಾ ಕಾರ್ಯ ಮಾಡುತ್ತಿದ್ದಾರೆ.

ಮಾರ್ಚ್​ 22 ರಂದು ಘೋಷಣೆಯಾದ ಜನತಾ ಕರ್ಫ್ಯೂ ದಿನದಿಂದ ಹಿಡಿದು ಇಲ್ಲಿಯ ವರಗೂ ಮೈಸೂರು ನಗರದ ಅರಮನೆ ಸುತ್ತಮುತ್ತ, ದೇವರಾಜು ಅರಸು ರಸ್ತೆ, ಜೆಕೆ ಮೈದಾನ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್​​ಗಳನ್ನು ವಿತರಿಸುತ್ತಿದ್ದಾರೆ.

ರಾಜಸ್ಥಾನ, ಗುಜರಾತ್, ಕಾಶ್ಮೀರ ಸೇರಿದಂತೆ ಮುಂತಾದ ಕಡೆಗಳಿಂದ ಬಂದು ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳಿಗೆ ದಿನ ಬಳಕೆ ವಸ್ತುಗಳ ಕಿಟ್​​ಗಳನ್ನು ಸದ್ದಿಲ್ಲದೆ ತಮ್ಮ ಬೆಂಬಲಿಗರ ಜೊತೆ ಹೋಗಿ ನಿತ್ಯ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.