ETV Bharat / city

ಕಾಡಾನೆ ದಾಳಿ: ಕೇರಳ ಮೂಲದ ವ್ಯಕ್ತಿ ಸಾವು! - ಮೈಸೂರು

ಕಾಡಾನೆ ದಾಳಿಗೆ ಕೇರಳ ಮೂಲದ ರೈತ ಬಾಲನ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Man from Kerala dies due to Elephant Attack
ಕಾಡಾನೆ ದಾಳಿ: ಕೇರಳ ಮೂಲದ ವ್ಯಕ್ತಿ ಸಾವು
author img

By

Published : Aug 12, 2022, 12:03 PM IST

ಮೈಸೂರು: ಕಾಡಾನೆ ದಾಳಿಗೆ ಕೇರಳ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಸರಗೂರು ತಾಲೂಕಿನ ಎತ್ತಿಗೆ ಗ್ರಾಮದ ಹೊರವಲಯದ‌ ಜಮೀನಿನಲ್ಲಿ ನಡೆದಿದೆ. ಬಾಲನ್ (60) ಆನೆ ದಾಳಿಗೆ ಬಲಿಯಾದ ರೈತ.

ಈತ ಎತ್ತಿಗೆ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದ. ಬೆಳಗ್ಗೆ ಜಮೀನಿನತ್ತ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸುವ ವೇಳೆ ದಾಳಿ ನಡೆಸಿದ ಆನೆ ಇವರನ್ನು ತುಳಿದು ಸಾಯಿಸಿದೆ ಎನ್ನಲಾಗ್ತಿದೆ.

ಬೆಳಗಾದರೂ ಅರಣ್ಯ ಸೇರದೇ ನಾಡಿನಲ್ಲೇ ಆನೆಗಳು ಬೀಡುಬಿಟ್ಟಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರು ದೌಡಾಯಿಸಿದ್ದಾರೆ‌. ಕಾಡಾನೆಗಳ ಉಪಟಳದಿಂದ ಬೆಳೆ ಹಾನಿ ಜೊತೆಗೆ ಜೀವಹಾನಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಮನಗರ: ಕಾಡಾನೆ ದಾಳಿಗೆ ಮಹಿಳೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.