ಮೈಸೂರು : 2006ರಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಕ್ಯಾಶ್ಲೆಸ್, 10 ಪರ್ಸೆಂಟ್ ಸಿಎಂ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು. ಈಗ ಅವರು ಸಿದ್ದರಾಮಯ್ಯ ಅವರ ಬಗ್ಗೆ ಏನ್ ಮಾತನಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿನಾಯಕಿ ಪಕ್ಷಕ್ಕೆ ಬರುವ ಮುನ್ನ ಏಕವಚನದಲ್ಲಿ ನಿಂದಿಸಿದ್ರು ಅಂತಾ ಪ್ರತಾಪ್ ಸಿಂಹ ಹೇಳುತ್ತಾರೆ. ಆದರೆ, ಪ್ರತಾಪ್ ಸಿಂಹ ಅವರು 2006ರಲ್ಲಿ ಬಿ ಎಸ್ ಯಡಿಯೂರಪ್ಪ ಕ್ಯಾಶ್ಲೆಸ್ ಸಿಎಂ, ಚೆಕ್ ಪಡೆದ ಸಿಎಂ, 10 ಪರ್ಸೆಂಟ್ ಸಿಎಂ ಎಂದೆಲ್ಲ ಟೀಕೆ ಮಾಡಿ ಟ್ಚೀಟ್ ಮಾಡಿದ್ದರು. ಈಗ ಅವರು ಯಾವ ಪಕ್ಷದಲ್ಲಿದ್ದಾರೆ. ಹಿಟ್ ಅಂಡ್ ರನ್ ಕೆಲಸ ಮಾಡುವುದನ್ನ ಪ್ರತಾಪಸಿಂಹ ಸಿಂಹ ಬಿಡಬೇಕು. ಇಲ್ಲದಿದ್ರೆ, ಅವರು ಅಂದಿನ ಬಿಜೆಪಿ ಸರ್ಕಾರಕ್ಕೆ ಮಾಡಿರುವ ಟ್ವೀಟ್‌ನ ಒಂದೊಂದಾಗಿ ಬಿಡುಗಡೆ ಮಾಡುತ್ತೇವೆ ಎಂದು ಕಿಡಿಕಾರಿದರು.
ಹೆಚ್.ವಿಶ್ವನಾಥ್ ಅವರು, ಮೋದಿ ದೇಶದ ಅಹಿಂದ ನಾಯಕ ಅಂತಾರೆ. ಅವರು ಸಚಿವ ಹಾಗೂ ಎಂಪಿ ಸ್ಥಾನ ನಿಭಾಯಿಸಿ ಬಂದವರು, ಈ ರೀತಿ ಹೇಳಿಕೆ ನೀಡುವ ಮುನ್ನ ಯೋಚಿಸಬೇಕು. ಹೆಚ್ ಡಿ ದೇವೇಗೌಡ, ಡಾ.ಮನಮೋಹನ್ ಸಿಂಗ್, ಚಂದ್ರಶೇಖರ್ ಅವರೆಲ್ಲ ಹಿಂದುಳಿದ ನಾಯಕರಲ್ಲವೇ ಎಂದು ಪ್ರಶ್ನಿಸಿದರು. ಇನ್ನು, ಕೊರೊನಾ ರೋಗಿಗಳ ಚಿಕಿತ್ಸೆ ವಿಚಾರವಾಗಿ ರಾಜ್ಯದಲ್ಲಿ 3,322 ಕೋಟಿ ರೂ. ಭ್ರಷ್ಟಾಚಾರವಾಗಿದೆ. ಇದರ ಬಗ್ಗೆ ತಾಲೂಕು ಮಟ್ಟದಿಂದ ಜನರಿಗೆ ಮಾಹಿತಿ ನೀಡುತ್ತೇವೆ. ಭ್ರಷ್ಟಚಾರವಾಗಿಲ್ಲ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಮಾತನಾಡಿ, ರಾಜೀವ್ ಗಾಂಧಿ ಟ್ರಸ್ಟ್ ಬಗ್ಗೆ ತನಿಖೆ ಮಾಡುವ ಕೇಂದ್ರ ಸರ್ಕಾರ, ಪಕ್ಷದ ಮುಖಂಡನ ನೇತೃತ್ವದಲ್ಲಿ ನಡೆಯುತ್ತಿರುವ ವಿವೇಕಾನಂದ ಟ್ರಸ್ಟ್ ಬಗ್ಗೆ ತನಿಖೆ ಮಾಡಲಿ. ಕೇಂದ್ರ ಸರ್ಕಾರ ಅನ್ಫಿಟ್ ಹಾಗೂ ನಾಲಾಯಕ್ ಸರ್ಕಾರ ಎಂದು ಹರಿಹಾಯ್ದರು.